
ನವದೆಹಲಿ: ರೈಲು ದುರಂತದ ಹಿಂದೆ ದುಷ್ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದಲ್ಲಿ 277 ಜನರ ಸಾವಿಗೆ ಕಾರಣವಾದ ಭೀಕರ ರೈಲು ಅಪಘಾತದ ಹಿಂದೆ ಸಮಾಜಘಾತಕ ಶಕ್ತಿಗಳ ಸಂಚು ಇರುವ ಶಂಕೆ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ರೈಲ್ವೆ ಮಂಡಳಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದು, ಘಟನೆಯ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶಂಕೆ ವ್ಯಕ್ತಪಡಿಸಿದ್ದಾರೆ. ದುರಂತದ ಮೂಲ ಕಾರಣ, ಅದರ ಹಿಂದಿರುವವರನ್ನು ಕೂಡ ಗುರುತಿಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ಸಮಿತಿ ತನಿಖೆ ನಡೆಸುತ್ತಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ದುರ್ಘಟನೆಯಲ್ಲಿ ಕಾಣದ ಕೈಗಳಿರುವ ಬಗ್ಗೆ ಅಶ್ವಿನಿ ವೈಷ್ಣವ್ ಶಂಕೆ ವ್ಯಕ್ತಪಡಿಸಿದ್ದಾರೆ. ಇಂಟರ್ ಲಾಕಿಂಗ್ ಪಾಯಿಂಟ್ ಬದಲಿಸಿದ್ದರಿಂದ ರೈಲು ಡಿಕ್ಕಿಯಾಗಿವೆ. ಆದರೆ ಇಂಟರ್ ಲಾಕಿಂಗ್ ಬದಲಿಸಿದ್ದು ಯಾರು ಎಂಬುದೇ ನಿಗೂಢವಾಗಿದೆ ಎಂದು ರೈಲ್ವೆ ತಿಳಿಸಿದ್ದು, ಹೀಗಾಗಿ ಹೀಗಾಗಿ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ.