ಚುನಾವಣಾ ಆಯೋಗದಂತೆ ಕೇಂದ್ರ ತನಿಕಾ ದಳ (ಸಿಬಿಐ) ಸಹ ಸ್ವಾಯತ್ತವಾಗಿ ಕೆಲಸ ಮಾಡಬೇಕೆಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ತಿಳಿಸಿದೆ.
ರಾಮನಾಥಪುರಂ ಜಿಲ್ಲೆಯಲ್ಲಿ ಜರುಗಿದ 300 ಕೋಟಿ ರೂಪಾಯಿಗಳ ವಂಚನೆಯ ಪ್ರಕರಣದ ಆಲಿಕೆ ವೇಳೆ ಮಾತನಾಡಿ ನ್ಯಾಯಾಧೀಶರಾದ ಎನ್. ಕಿರುಬಾಕರನ್ ಹಾಗೂ ಪಿ ಪುಗಲೆಂದಿ, “ಸಿಬಿಐ ಚುನಾವಣಾ ಆಯೋಗದಂತೆ ಸ್ವತಂತ್ರವಾಗಿ ಕೆಲಸ ಮಾಡಬೇಕು. ಸಿಬಿಐಗೆ ಅಗತ್ಯವಿರುವ ದುಡ್ಡನ್ನು ಪ್ರತಿ ವರ್ಷದ ಬಜೆಟ್‌ನಲ್ಲಿ ಮಂಜೂರು ಮಾಡಬೇಕು,” ಎಂದಿದ್ದಾರೆ.
“ಸಿಬಿಐ ನಿದೇರ್ಶಕರಿಗೆ ನೇರವಾಗಿ ಪ್ರಧಾನ ಮಂತ್ರಿಗೆ ವರದಿ ಮಾಡಿಕೊಳ್ಳುವಂತೆ ಸಂಪುಟ ಸಚಿವರ ಹಾಗೆ ವಿಶೇಷ ಅಧಿಕಾರ ನೀಡಬೇಕು. ಜೊತೆಗೆ ಅವರು ಕೇಂದ್ರ ಸರ್ಕಾರದ ಆಡಳಿತದ ಅಡಿ ಬರದೇ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಬೇಕು,” ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ರೈಲು ಚಲಾಯಿಸುತ್ತಿದ್ದಾರೆ ನಕಲಿ ಐಎಎಸ್, ಐಪಿಎಸ್ ಅಧಿಕಾರಿ….!
“ಸಿಬಿಐಗೆ ಅಮೆರಿಕದ ಎಫ್‌ಬಿಐ ಹಾಗೂ ಬ್ರಿಟನ್‌ನ ಸ್ಕಾಟ್ಲೆಂಡ್ ಯಾರ್ಡ್‌ನಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಬೇಕು. ಸಿಬಿಐಗೆ ಅಗತ್ಯವಿರುವ ಮೂಲ ಸೌಕರ್ಯಗಳು, ನಿರ್ಮಾಣಗಳು ಹಾಗೂ ವಸತಿ ಸೌಲಭ್ಯಗಳು ಮತ್ತು ತಾಂತ್ರಿಕ ಸವಲತ್ತುಗಳನ್ನು ಆರು ವಾರಗಳ ಒಳಗೆ ಕಲ್ಪಿಸಬೇಕು. ಸೈಬರ್, ವಿಧಿ ವಿಜ್ಞಾನ ಹಾಗೂ ಆರ್ಥಿಕ ಆಡಿಟಿಂಗ್ ಮಾಡಲು ಬೇಕಾದ ತಜ್ಞರ ನೇಮಕಾತಿ ಸಂಬಂಧ ಅಗತ್ಯ ನೀತಿ ನಿರ್ಣಯಗಳನ್ನು ಆರು ವಾರಗಳ ಒಳಗೆ ತೆಗೆದುಕೊಳ್ಳಬೇಕು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು,” ಎಂದು ನ್ಯಾಯಾಲಯ ಆದೇಶಿಸಿದೆ.