ಪಾಟ್ನಾ: ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಆಪ್ತನ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರ್.ಜೆ.ಡಿ. ವಿಧಾನಪರಿಷತ್ ಸದಸ್ಯ ಸುನಿಲ್ ಸಿಂಗ್ ಅವರ ಪಾಟ್ನಾದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಜಾರ್ಖಂಡ್ ಮೈನಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಪಾಟ್ನಾದರುವ ಸುನಿಲ್ ಸಿಂಗ್ ಮನೆ ಮೇಲೆ ದಾಳಿ ಮಾಡಲಾಗಿದೆ. ಬಿಹಾರ, ತಮಿಳುನಾಡು ಸೇರಿದಂತೆ ಒಟ್ಟು 17 ಕಡೆ ದಾಳಿ ನಡೆಸಲಾಗಿದೆ.
ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಅದರಲ್ಲಿ ಯಾವುದೇ ಅರ್ಥವಿಲ್ಲ. ಭಯದಿಂದ ಶಾಸಕರು ತಮ್ಮ ಪರವಾಗಿ ಬರುತ್ತಾರೆ ಎಂದು ಭಾವಿಸಿ ಅವರು ಇದನ್ನು ಮಾಡುತ್ತಿದ್ದಾರೆ ಎಂದು ಸುನಿಲ್ ಸಿಂಗ್ ಅವರು ತಮ್ಮ ನಿವಾಸದ ಮೇಲೆ ಸಿಬಿಐ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.