
ನವದೆಹಲಿ: ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೂಡಿಕೆ ಮಾಡಿರುವ ವಿವರ ನೀಡುವಂತೆ ಕೇರಳ ಮೂಲದ ಜೈ ಹಿಂದ್ ಟಿವಿ ಚಾನಲ್ ಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.
ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣದಲ್ಲಿ ನೋಟಿಸ್ ನೀಡಲಾಗಿದ್ದು, ಜನವರಿ 11ರಂದು ವಿಚಾರಣೆಗೆ ಹಾಜರಾಗುವಂತೆ ಜೈಹಿಂದ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಅವರು ಜೈ ಹಿಂದ್ ಚಾನಲ್ ನಲ್ಲಿ ಮಾಡಿರುವ ಹೂಡಿಕೆ, ಅದಕ್ಕೆ ಪ್ರತಿಯಾಗಿ ಪಡೆದ ಲಾಭಾಂಶ, ಹೊಂದಿರುವ ಆಸ್ತಿಯ ವಿವರ ನೀಡಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.