ನವದೆಹಲಿ: ಯೆಸ್ ಬ್ಯಾಂಕ್ ಡಿ.ಹೆಚ್.ಎಫ್.ಎಲ್. ಪ್ರಕರಣದಲ್ಲಿ ಮಹಾರಾಷ್ಟ್ರದ ಉನ್ನತ ರಾಜಕಾರಣಿಗಳಿಗೆ ಆಪ್ತ ಎನ್ನಲಾದ ಪುಣೆಯ ಉದ್ಯಮಿ ಅವಿನಾಶ್ ಭೋಸ್ಲೆ ಅವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಗುರುವಾರ ಬಂಧಿಸಿದೆ.
ಮಾರ್ಚ್ 2020 ರಲ್ಲಿ ದಾಖಲಾದ ಯೆಸ್ ಬ್ಯಾಂಕ್ DHFL ಪ್ರಕರಣದಲ್ಲಿ ಸಿಬಿಐ ಭೋಸ್ಲೆ ಅವರ ಮನೆಯನ್ನು ಶೋಧಿಸಿದೆ. ಸಿಬಿಐ ಏಪ್ರಿಲ್ 30 ರಂದು ಮುಂಬೈ ಮತ್ತು ಪುಣೆಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬಿಲ್ಡರ್ ಮತ್ತು ಉದ್ಯಮಿ ಶಾಹಿದ್ ಬಲ್ವಾ ಮತ್ತು ಪುಣೆ ಮೂಲದ ಉದ್ಯಮಿ ಅವಿನಾಶ್ ಬೋಂಸ್ಲೆಗೆ ಸಂಬಂಧಿಸಿದ ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಯೆಸ್ ಬ್ಯಾಂಕ್ ಡಿಎಚ್‌ಎಫ್‌ಎಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ, ಇದರಲ್ಲಿ ರೇಡಿಯಸ್ ಗ್ರೂಪ್ ನ ಬಿಲ್ಡರ್ ಸಂಜಯ್ ಛಾಬ್ರಿಯಾ ಅವರನ್ನು ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. ಮುಂಬೈ ಮತ್ತು ಪುಣೆಯಲ್ಲಿ ಒಟ್ಟು 8 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ.
ಸಂಜಯ್ ಚಾಬ್ರಿಯಾ ರೇಡಿಯಸ್ ಗ್ರೂಪ್‌ನ ಪ್ರವರ್ತಕರಾಗಿದ್ದಾರೆ. ರೇಡಿಯಸ್ ಗ್ರೂಪ್ DHFL (ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್) ಮತ್ತು ಯೆಸ್ ಬ್ಯಾಂಕ್ ನಿಂದ ಭಾರಿ ಸಾಲವನ್ನು ಪಡೆದಿತ್ತು.