alex Certify ತಮಿಳುನಾಡಿಗೆ ಕಾವೇರಿ ನೀರು ಬಿಡುವ ಬಗ್ಗೆ ಇಂದು ರಾತ್ರಿ ಸಿಎಂ ಜತೆ ಚರ್ಚಿಸಿ ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳುನಾಡಿಗೆ ಕಾವೇರಿ ನೀರು ಬಿಡುವ ಬಗ್ಗೆ ಇಂದು ರಾತ್ರಿ ಸಿಎಂ ಜತೆ ಚರ್ಚಿಸಿ ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

ಮೈಸೂರು: ತಮಿಳುನಾಡಿಗೆ ನಿತ್ಯ 5000 ಕ್ಯೂಸೆಕ್ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.

ನಾನು ಇದುವರೆಗೆ ನೀರು ಬಿಡುವಂತೆ ಯಾವುದೇ ಸೂಚನೆ ನೀಡಿಲ್ಲ. ಕಾನೂನು ತಜ್ಞರ ಬಳಿ ಈ ಸಂಬಂಧ ಎಲ್ಲಾ ಮಾಹಿತಿ ಪಡೆದಿದ್ದೇನೆ. ರಾಜ್ಯದ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ತಮಿಳುನಾಡಿನವರು ಪ್ರತಿದಿನ 24,000 ಕ್ಯೂಸೆಕ್ ನೀರು ಬಿಡಲು ಕೇಳಿದ್ದರು. ಇದನ್ನು ರಾಜ್ಯದ ಪರ ವಕೀಲರು 5000 ಕ್ಕೆ ಇಳಿಸಿದ್ದಾರೆ. ಆದರೆ ಇದುವರೆಗೆ ನೀರು ಬಿಡುವ ತೀರ್ಮಾನಕ್ಕೆ ನಾವು ಬಂದಿಲ್ಲ. ಇಂದು ರಾತ್ರಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ರೈತರಿಗೂ ಇದರ ಪರಿಸ್ಥಿತಿ ಗೊತ್ತಿದೆ. ರೈತರ ಹಿತ ಕಾಪಾಡಬೇಕಿದೆ. ಕಾನೂನನ್ನು ಕೂಡ ಗೌರವಿಸಬೇಕಿದೆ. ಈ ಸಂಬಂಧ ಕೀಲಿ ಕೈ ಕೇಂದ್ರ ಸರ್ಕಾರದ ಕೈಯಲ್ಲಿಯೂ ಇದೆ. ರಾಜ್ಯ ಬಿಜೆಪಿ ನಮ್ಮನ್ನು ಕಟ್ಟಿ ಹಾಕುವ ಯತ್ನ ಮಾಡುತ್ತಿದೆ. ಯಾರು ಯಾವ ಸಮಯದಲ್ಲಿ ಎಷ್ಟು ನೀರು ಬಿಟ್ಟಿದ್ದಾರೆಂದು ಗೊತ್ತಿದೆ. ನಾನು ರಾಜಕೀಯ ಮಾಡಬಾರದೆಂದು ಸುಮ್ಮನಿದ್ದೇನೆ. ರಾಜ್ಯ ಬಿಜೆಪಿ ನಾಯಕರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಎಲ್ಲರಿಗೂ ಎಲ್ಲಾ ವಾಸ್ತವ ಸ್ಥಿತಿ ಗೊತ್ತಿದೆ. ಬಿಜೆಪಿಯವರು ರಾಜಕಾರಣ ಮಾಡಬೇಕೆಂದು ನಿರ್ಧರಿಸಿದ್ದರೆ ಮಾಡಲಿ ಎಂದು ಮೈಸೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...