alex Certify ಹೂಕೋಸಿನಲ್ಲಿದೆ ಹೃದ್ರೋಗದ ಅಪಾಯ ಕಡಿಮೆ ಮಾಡುವ ಗುಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂಕೋಸಿನಲ್ಲಿದೆ ಹೃದ್ರೋಗದ ಅಪಾಯ ಕಡಿಮೆ ಮಾಡುವ ಗುಣ

ಹೂಕೋಸು ಅಥವಾ ಕಾಲಿ ಫ್ಲವರ್ ನಲ್ಲಿ ಅತ್ಯಧಿಕ ಪ್ರೊಟೀನ್ ಗಳಿದ್ದು ಇತರ ತರಕಾರಿಗಳಿಗೆ ಹೋಲಿಸಿದರೆ ಇದರಲ್ಲಿ ಅತಿ ಹೆಚ್ಚು ಕಾರ್ಬೋಹೈಡ್ರೇಟ್ ಗಳಿವೆ. ಇದರ ಸೇವನೆಯಿಂದ ಹಲವು ಪ್ರಯೋಜನಗಳಿವೆ.

ಫ್ಲವರ್ ನಲ್ಲಿ ಕ್ಯಾಲ್ಸಿಯಂ ಮತ್ತು ಆಂಟಿ ಆಕ್ಸಿಡೆಂಟ್ ಗಳಿದ್ದು ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಫೈಬರ್ ಅಂಶವೂ ಸಾಕಷ್ಟಿದ್ದು ಹೃದ್ರೋಗದ ಅಪಾಯಗಳನ್ನು ಕಡಿಮೆ ಮಾಡುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡಲು ಇದು ಅತ್ಯುತ್ತಮ ತರಕಾರಿ ಎಂದು ಗುರುತಿಸಲಾಗಿದೆ. ಇದು ಡಿಎನ್ಎಗಾಗುವ ಹಾನಿಯನ್ನು ತಪ್ಪಿಸಿ ಜೀವಕೋಶದ ಆರೋಗ್ಯವನ್ನು ಕಾಪಾಡುತ್ತದೆ. ಹೃದ್ರೋಗ ತಡೆಯಲೂ ಇದು ಅತ್ಯುತ್ತಮ ತರಕಾರಿ ಎನ್ನಲಾಗಿದೆ.

ಇದರ ಸೇವನೆಯಿಂದ ರಕ್ತ ಪರಿಚಲನೆ ಚುರುಕುಗೊಳ್ಳುತ್ತದೆ. ಗರ್ಭಿಣಿಯರಿಗೆ ಅತ್ಯಗತ್ಯವಾದ ಫೋಲಿಕ್ ಆಮ್ಲವನ್ನು ಇದು ಒದಗಿಸುತ್ತದೆ. ಹುಟ್ಟಲಿರುವ ಮಗುವಿನ ಬೆಳವಣಿಗೆಗೂ ಇದು ನೆರವಾಗುತ್ತದೆ. ಭ್ರೂಣದಲ್ಲಿ ಯಾವುದೇ ನರಸಂಬಂಧಿ ಸಮಸ್ಯೆಗಳು ತಲೆದೋರದಂತೆ ಇದು ನೋಡಿಕೊಳ್ಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...