ಬರೇಲಿ: ಉತ್ತರ ಪ್ರದೇಶದ ಲಖಿಂಪುರಖೇರಿ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯ ಮತ್ತೊಬ್ಬ ಗೆಳೆಯನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಸುರ್ಜಿತ್ ಕುಮಾರ್ ಮೃತಪಟ್ಟ ಯುವಕ. ಶುಕ್ರವಾರ ಆತನ ಮೃತದೇಹ ಸುನ್ಸಿ ಗ್ರಾಮದ ಬಳಿ ಪತ್ತೆಯಾಗಿತ್ತು. ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ವರದಿಯಲ್ಲಿ ಆತನನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ. ಇದರ ಬೆನ್ನೆಲ್ಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸುರ್ಜಿತ್ ಕುಮಾರ್ ವಿಧವೆಯೊಂದಿಗೆ ಸಂಬಂಧ ಬೆಳೆಸಿರುವುದು ತನಿಖೆಯ ವೇಳೆ ಗೊತ್ತಾಗಿದೆ. ಮೊಬೈಲ್ ಕರೆ ದಾಖಲೆ ಆಧರಿಸಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಹಿಳೆಯ ದೂರದ ಸಂಬಂಧಿಯಾಗಿದ್ದ ಸುರ್ಜಿತ್ ಕುಮಾರ್ ಮತ್ತು ಹರಪಾಲ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನುವುದು ತಿಳಿದುಬಂದಿದೆ.
ಎರಡು ವರ್ಷಗಳ ಹಿಂದೆ ಗಂಡ ತೀರಿಕೊಂಡ ನಂತರ ಮಹಿಳೆ ಇಬ್ಬರೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಆದರೆ, ಹರಪಾಲ್ ಗೆ ಮಹಿಳೆ ಹಾಗೂ ಸುರ್ಜಿತ್ ಜೊತೆಗಿನ ಸಂಬಂಧ ತಿಳಿದಿರಲಿಲ್ಲ. ಬುಧವಾರ ಹರಪಾಲ್ ಮಹಿಳೆಯ ಮನೆಗೆ ಬಂದ ಸಂದರ್ಭದಲ್ಲಿ ಸುರ್ಹಿತ್ ಆಕೆಯ ಜೊತೆಗೆ ಇರುವುದನ್ನು ಕಂಡು ಕೋಪಗೊಂಡಿದ್ದಾನೆ. ಕತ್ತು ಹಿಸುಕಿ ಸುರ್ಜಿತ್ ಕೊಲೆ ಮಾಡಿ ಆಕೆಯ ನೆರವಿನಿಂದ ಮೃತದೇಹವನ್ನು ಹಳ್ಳಿಯ ಹೊರಗೆ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.