
ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರೇಮ ವೈಫಲ್ಯದಿಂದ ಕೋಪಗೊಂಡ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮೇಲೆ ಕಾರು ಹರಿಸಿ ಚಾಕು ಇರಿದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಫೆಬ್ರವರಿ 25 ರಂದು ಶೇಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ರಿಂಕು ಎಂಬ ಯುವತಿ, ತನ್ನ ಮಾಜಿ ಪ್ರಿಯಕರ ಜಯ್ ಕುಮಾರ್ ಪಟೇಲ್ ಮೇಲೆ ಈ ಹಲ್ಲೆ ನಡೆಸಿದ್ದಾಳೆ. ಜಯ್ ಕುಮಾರ್ ಸ್ಕೂಟರ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ರಿಂಕು ಆತನ ಸ್ಕೂಟರ್‌ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾಳೆ. ಬಳಿಕ ಕೆಳಗೆ ಬಿದ್ದ ಜಯ್ ಕುಮಾರ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾಳೆ. ಈ ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆಗೊಳಗಾದ ಜಯ್ ಕುಮಾರ್ ಪಟೇಲ್, ರಿಂಕು ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 13 ವರ್ಷಗಳ ಹಿಂದೆ ರಿಂಕು ಮತ್ತು ಜಯ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ವೈಮನಸ್ಸಿನಿಂದ ನಿಶ್ಚಿತಾರ್ಥ ಮುರಿದುಕೊಂಡಿದ್ದರು.
ನಂತರ ರಿಂಕು ಬೇರೆಯವರನ್ನು ಮದುವೆಯಾದರೂ ಜಯ್ ಕುಮಾರ್ ಜೊತೆ ಸಂಪರ್ಕದಲ್ಲಿದ್ದಳು. ಜಯ್ ಕುಮಾರ್ ಆಕೆಯ ಕರೆ ಮತ್ತು ಸಂದೇಶಗಳಿಗೆ ಉತ್ತರಿಸದಿದ್ದಾಗ ಕೋಪಗೊಂಡ ರಿಂಕು ಈ ಹಲ್ಲೆ ನಡೆಸಿದ್ದಾಳೆ.
ಪೊಲೀಸರು ರಿಂಕುಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಗಾಯಗೊಂಡ ಜಯ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
गुजरात में एक रिंकी पटेल नाम की महिला थी
13 साल पहले उनकी सगाई किसी जयकुमार पटेल से हुई थी
किसी वजह से जयकुमार पटेल ने सगाई तोड़ दी थी बाद में दोनों की अलग-अलग जगह शादी हो गई
दोनों अपने-अपने जिंदगी में सेटल थे
एक दिन रिंकी पटेल कार से जा रही थी तब उन्होंने जय कुमार पटेल को… pic.twitter.com/aWRY7W6VVC
— 🇮🇳Jitendra pratap singh🇮🇳 (@jpsin1) March 3, 2025