ಇಂಡೋನೇಷಿಯಾದಲ್ಲಿ ನಡೆದಿದೆ ಎನ್ನಲಾದ ಘಟನೆಯಲ್ಲಿ, ಸ್ಕೂಟಿಯಲ್ಲಿ ಹೋಗುವಾಗ ಯುವತಿಯೊಬ್ಬರು ಪಾದಚಾರಿಗೆ ಡಿಕ್ಕಿ ಹೊಡೆದು ಸಹಾಯ ಮಾಡದೆ ಪರಾರಿಯಾಗಿದ್ದಾರೆ.
ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ, ಯುವತಿ ಸ್ಕೂಟಿಯಲ್ಲಿ ಹೋಗುವಾಗ ರಸ್ತೆಯ ಮಧ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ವ್ಯಕ್ತಿ ರಸ್ತೆಗೆ ಬಿದ್ದಿದ್ದು, ಯುವತಿ ಸ್ವಲ್ಪ ಹೊತ್ತು ನಿಂತು ನಂತರ ಸಹಾಯ ಮಾಡದೆ ಸ್ಕೂಟಿಯನ್ನು ಚಲಾಯಿಸಿಕೊಂಡು ಹೋಗಿದ್ದಾರೆ.
ಈ ಘಟನೆ ಆನ್‌ಲೈನ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ಇಂಟರ್ನೆಟ್ ಬಳಕೆದಾರರು ಯುವತಿಯ ನಡವಳಿಕೆಯನ್ನು ಖಂಡಿಸಿದ್ದಾರೆ. ಪಾದಚಾರಿಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಲ್ಲದೇ ಯುವತಿ ಏಕೆ ಸಹಾಯ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
A Lady Ran away after hitting a Pedestrian with Scooter, Indonesia pic.twitter.com/4sG1PzW90J
— Ghar Ke Kalesh (@gharkekalesh) February 1, 2025