ಆಭರಣದ ಅಂಗಡಿಗಳಲ್ಲಿ ಕಳ್ಳತನ ನಡೆದಿರುವ ಪ್ರಕರಣಗಳ ಬಗ್ಗೆ ಕೇಳಿರ್ತೀರಾ. ಈ ಪ್ರಕರಣಗಳು ಎಷ್ಟು ಗಂಭೀರವಾದವು ಅನ್ನೋದು ಸಹ ನಿಮಗೆ ತಿಳಿದಿರುತ್ತೆ. ಆದರೆ ಆಭರಣದ ಅಂಗಡಿಯಲ್ಲಿ ನಡೆದ ಕಳ್ಳತನದ ಯತ್ನದ ಈ ದೃಶ್ಯಾವಳಿಗಳನ್ನ ನೋಡಿದ್ರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ..!
ಆಭರಣದ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನೊಬ್ಬ ಸರಗಳನ್ನ ತೋರಿಸುವಂತೆ ಹೇಳಿದ್ದಾನೆ. ಸಿಬ್ಬಂದಿ ಸರಗಳನ್ನ ತೋರಿಸುತ್ತಿದ್ದಂತೆಯೇ ಒಂದನ್ನ ಕುತ್ತಿಗೆಗೆ ಹಾಕಿಕೊಂಡ ಕಳ್ಳ ಅಲ್ಲಿಂದ ಸೀದಾ ಹೊರಹೋಗಲು ಓಡಿದ್ದಾನೆ. ಆದರೆ ಅಂಗಡಿಯ ಬಾಗಿಲು ಬಂದ್ ಆಗಿದ್ದರಿಂದ ಈತನ ಪ್ಲಾನ್ ಫೇಲ್ ಆಗಿದೆ.
ಮತ್ತೆ ಪುನಃ ಸಿಬ್ಬಂದಿ ಬಳಿಗೆ ಬಂದ ಕಳ್ಳ ಸರವನ್ನ ಹಿಂದಿರುಗಿಸಿದ್ದಾನೆ. ಅಲ್ಲದೇ ಪೊಲೀಸ್ ಠಾಣೆ ಅತಿಥಿ ಕೂಡ ಆಗಿದ್ದಾನೆ. ಇದು 2018ರ ವಿಡಿಯೋ ಆಗಿದ್ದು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಮೂಲಗಳ ಪ್ರಕಾರ ಇದು ಥೈಲ್ಯಾಂಡ್ನಲ್ಲಿ ನಡೆದ ಘಟನೆಯಾಗಿದ್ದು ಬಂಧಿತ ಆರೋಪಿಯನ್ನ 25 ವರ್ಷದ ಸುಫಚೈ ಪ್ಯಾಂಥೊಂಗ್ ಎಂದು ಗುರುತಿಸಲಾಗಿದೆ.
https://twitter.com/i/status/1409088826874732545