ಭಾರತದ ಅತ್ಯಂತ ಜನಪ್ರಿಯ ಬ್ರಾಂಡ್ನ ಮೋಟಾರ್ಬೈಕ್ಗಳಲ್ಲಿ ಒಂದಾದ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350ಗೆ ಏಕಾಏಕಿ ಬೆಂಕಿಗೆ ಆಹುತಿಯಾಗಿದೆ. ಇದರ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
‘ಟ್ರಿಪ್ಪಿಯೋಗಿ669’ ಎಂಬ ಚಾನಲ್ನಿಂದ ಯೂಟ್ಯೂಬ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಘಟನೆಯು ನುಬ್ರಾ ಮತ್ತು ಪ್ಯಾಂಗಾಂಗ್ ನಡುವೆ ಸಂಭವಿಸಿದೆ. ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಅನ್ನು ಲಡಾಖ್ನಲ್ಲಿ ಟೂರ್ಗಾಗಿ ಬಳಸಿರುವ ಸಂದರ್ಭದಲ್ಲಿ ಈ ಅನಾಹುತ ನಡೆದಿದೆ.
ಈ ವಿಡಿಯೋದಲ್ಲಿ ಬೈಕ್ನ ಎಲೆಕ್ಟ್ರಿಕ್ ಸ್ಟಾರ್ಟರ್ ಆನ್ ಆಗುವ ಮೊದಲು ಬೈಕ್ ರಸ್ತೆಯ ಬದಿಯಲ್ಲಿ ನಿಂತಿರುವುದನ್ನು ಕಾಣಬಹುದು. ನಂತರ ಬೈಕ್ನಿಂದ ಬೆಂಕಿ ಹಾಗೂ ಹೊಗೆ ಹೊರ ಬರುತ್ತಿರುವುದು ಕಂಡು ಬಂದಿದೆ. ಮುಂದೆ ಜ್ವಾಲೆ ಹೆಚ್ಚುತ್ತಲೇ ಸಾಗಿದೆ.
ಈ ಅಸಮರ್ಪಕ ಕಾರ್ಯದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದಾಗ್ಯೂ, ಎಲೆಕ್ಟ್ರಿಕ್ ಸ್ಟಾರ್ಟರ್ ಬಹುಶಃ ದೋಷಯುಕ್ತ ವೈರಿಂಗ್ ವ್ಯವಸ್ಥೆಯಿಂದಾಗಿ ಹೀಗೆ ಆಗಿರಬಹುದು ಎನ್ನಲಾಗಿದೆ.