ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿ ಕಿರುಕುಳ ನೀಡಿರುವ ಸಿಸಿಟಿವಿ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಮತ್ತೊಂದು ಚರ್ಚೆಗೆ ನಾಂದಿ ಹಾಡಿದೆ.
ಈ ಘಟನೆಯು ಹಗಲು ಹೊತ್ತಿನಲ್ಲಿ ನಡೆದಿದ್ದು, ಬುರ್ಖಾವನ್ನು ಧರಿಸಿದ ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿ ಕಾಣಿಸಿಕೊಂಡು ಅವರನ್ನು ಹಿಂಬದಿಯಿಂದ ಬಂದು ಗಟ್ಟಿಯಾಗಿ ಹಿಡಿದು, ಖಾಸಗಿ ಅಂಗಗಳನ್ನು ಮುಟ್ಟಿದ್ದಾನೆ. ಮಹಿಳೆ ಪುರುಷನನ್ನು ತನ್ನಿಂದ ದೂರ ತಳ್ಳಲು ಹೆಣಗಾಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಆತ ಓಡಿ ಹೋಗುತ್ತಿರುವುದು ಸಹ ಕಂಡು ಬಂದಿದೆ.
BREAKING: ಡೀಸೆಲ್ ತೆರಿಗೆ ಇಳಿಕೆ, ಪೆಟ್ರೋಲ್ ತೆರಿಗೆ ಮನ್ನಾ: ಜಾಗತಿಕ ತೈಲ ಬೆಲೆ ಕಡಿಮೆಯಾಗುತ್ತಿದ್ದಂತೆ ಸರ್ಕಾರದ ಮಹತ್ವದ ಕ್ರಮ
ಹಿರಿಯ ಪತ್ರಕರ್ತ ಹಮೀದ್ ಮೀರ್ ವಿಡಿಯೊವನ್ನು ಪೋಸ್ಟ್ ಮಾಡಿ, ಈ ಘಟನೆಯು ಅಪರಾಧಿಯನ್ನು ಪತ್ತೆ ಮಾಡುವುದು, ಅವನನ್ನು ಶಿಕ್ಷಿಸುವುದು ಮತ್ತು ಇತರರಿಗೆ ಪಾಠವಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ, ಪಾಕಿಸ್ತಾನದ ಮೆಟ್ರೋ ನಿಲ್ದಾಣದ ಹೊರಗೆ ಹಲವಾರು ಪುರುಷರು ಕಿರುಕುಳ ನೀಡುವ ವಿಡಿಯೊ ವೈರಲ್ ಆಗಿತ್ತು.
ವರದಿಗಳ ಪ್ರಕಾರ ಶೇಕಡ 70 ರಷ್ಟು ಮಹಿಳೆಯರು ಪಾಕಿಸ್ತಾನದಲ್ಲಿ ಕೆಲಸದ ಸ್ಥಳದಲ್ಲಿ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಮಹಿಳೆಯರ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆ ಸಂಗ್ರಹಿಸಿದ ಮಾಹಿತಿಯು 2004 ಮತ್ತು 2016 ರ ನಡುವೆ 4,734 ಮಹಿಳೆಯರು ಲೈಂಗಿಕ ದೌರ್ಜನ್ಯವನ್ನು ಎದುರಿಸಿದ್ದಾರೆೆ. ಇತ್ತೀಚೆಗೆ, ಪಾಕಿಸ್ತಾನ ಸರ್ಕಾರವು “ಕೆಲಸದ ಸ್ಥಳದಲ್ಲಿ ಕಿರುಕುಳದ ವಿರುದ್ಧ ರಕ್ಷಣೆ (ತಿದ್ದುಪಡಿ ಮಸೂದೆ), 2022 ಮತ್ತು ತಿದ್ದುಪಡಿ ಮಾಡಿದೆ.