
ಸೋಮವಾರ ಮುಂಜಾನೆ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಕಂಪನವು ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ತೀವ್ರವಾಗಿ ಅನುಭವವಾಯಿತು.
ಭೂಕಂಪದ ತೀವ್ರತೆ 4.0 ಆಗಿದ್ದು, 5 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಮುಂಜಾನೆ 5:56ಕ್ಕೆ ಸಂಭವಿಸಿದ ಈ ಕಂಪನವು ಜನರಲ್ಲಿ ಆತಂಕ ಸೃಷ್ಟಿಸಿತು.
ಕಂಪನದ ಅನುಭವವಾದ ತಕ್ಷಣ ಜನರು ತಮ್ಮ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಂದ ಹೊರಗೆ ಓಡಿ ಬಂದರು. ಅನೇಕ ಜನರು ಕಟ್ಟಡಗಳು ಮತ್ತು ವಿದ್ಯುತ್ ಕಂಬಗಳು ಕಂಪಿಸುತ್ತಿರುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಭೂಕಂಪದಿಂದ ಯಾವುದೇ ಸಾವು ನೋವು ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ. ಆದರೂ, ಜನರು ಇನ್ನೂ ಆತಂಕದಲ್ಲಿದ್ದಾರೆ ಮತ್ತು ಮುಂದಿನ ಕಂಪನಗಳ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.
#Earthquake shook @Delhi at 05:36 am today.@TV9Bharatvarsh @BBCHindi @BBCsarika @indiatvnews pic.twitter.com/j9kKxLSyDz
— Jeet Sharma (@jeetsharma) February 17, 2025