
ವೈಎಸ್ಆರ್ಸಿಪಿ ನಾಯಕಿ ಡಿ. ರೇವತಿ ಗುಂಟೂರಿ ಕಾಜಾ ಟೋಲ್ನಲ್ಲಿ ಟೋಲ್ ಟ್ಯಾಕ್ಸ್ ಪೇ ಮಾಡಲು ಟೋಲ್ ಸಿಬ್ಬಂದಿ ತನ್ನ ಗಾಡಿಯನ್ನ ನಿಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಆಕ್ರೋಶಗೊಂಡಿದ್ದಾರೆ.
ಕಾರಿನಿಂದ ಇಳಿದ ರೇವತಿ ಸಿಬ್ಬಂದಿ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನೆಲ್ಲ ಕಿತ್ತೆಸೆದಿದ್ದಾರೆ. ಮಾತ್ರವಲ್ಲದೇ, ಆಕೆಯನ್ನ ತಡೆಯಲು ಬಂದ ಟೋಲ್ ಪ್ಲಾಜಾ ಸಿಬ್ಬಂದಿ ಕೆನ್ನೆಗೆ ಬಾರಿಸಿದ್ದಾರೆ. ಈ ಎಲ್ಲ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಮಂಗಳಗಿರಿ ಪೊಲೀಸ್ ಠಾಣೆಯಲ್ಲಿ ಡಿ. ರೇವತಿ ವಿರುದ್ಧ ಪ್ರಕರಣ ದಾಖಲಾಗಿದೆ.