ಜೋಡಿಗಳ ನಡುವಿನ ಜಗಳ ಕೆಲವೊಮ್ಮೆ ಭಾರೀ ವಿಕೋಪಕ್ಕೆ ತಲುಪಿ ಪರಸ್ಪರ ಕಚ್ಚಾಡಿಕೊಳ್ಳುವ ಮಟ್ಟವನ್ನೂ ಮುಟ್ಟಬಹುದು.
ರಷ್ಯಾದ ಈ ಜೋಡಿ ಇಂಥ ಫೈಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಕೊನೆಯಿಲ್ಲದ ವಾದ-ವಿವಾದಗಳು ಯಾವ ಮಟ್ಟಕ್ಕೆ ಹೋಗಬಲ್ಲವೆಂದು ಜಗತ್ತಿನಾದ್ಯಂತ ನೆಟ್ಟಿಗರು ನೋಡುವಂತೆ ಆಗಿದೆ ಈ ಜೋಡಿಯಿಂದ.
ಎರಡನೇ ಅಂತಸ್ತಿನಲ್ಲಿದ್ದ ಬಾಲ್ಕನಿ ಮೇಲೆ ನಿಂತುಕೊಂಡ ಜೋಡಿಯೊಂದು ಜಗಳವಾಡುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಇಬ್ಬರೂ ಸಹ ರೇಲಿಂಗ್ಸ್ ಹಾದು 25 ಅಡಿ ಆಳಕ್ಕೆ ಬೀಳುತ್ತಿರುವುದನ್ನು ನೋಡಬಹುದಾಗಿದೆ.
ದಾರಿಹೋಕನೊಬ್ಬ ಸೆರೆ ಹಿಡಿದಿರುವ ಈ ವಿಡಿಯೋದಲ್ಲಿ; ಓಲ್ಗಾ ವೋಲ್ಕೋವಾ ಹಾಗೂ ಯೆವ್ಗೆನಿ ಕರ್ಲಾಯ್ನ್ ಜೋಡಿ ಸೇಂಟ್ ಪೀಟರ್ಸ್‌ಬರ್ಗ್‌ನ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಕಚ್ಚಾಡುತ್ತಿರುವುದನ್ನು ನೋಡಬಹುದಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ.
https://youtu.be/WfmsYRU7GT4