
ಅವರು ಒಂದಾದ ಮೇಲೆ ಒಂದು ತಂದು ಅವರ ಮುಂದೆ ಇಟ್ಟಿದ್ದಾರೆ. ಅವರಿಗೆ ಇಷ್ಟವಾಗದಿದ್ದದ್ದನ್ನ ತೋರಿಸಿ ಅಲ್ಲೇ ಪಕ್ಕಕ್ಕೆ ಇಟ್ಟು ಹೋಗಿದ್ದಾರೆ. ಅವರು ಮತ್ತಷ್ಟು ಡಿಸೈನ್ ಆಭರಣ ತಂದು ಇವರ ಮುಂದೆ ಇಡುವಷ್ಟೊತ್ತಿಗೆ ಮಗು ಅಳುವುದಕ್ಕೆ ಶುರು ಮಾಡಿದೆ. ಅತ್ತ ಎಲ್ಲರ ಗಮನ ಮಗುವಿನತ್ತ ಇದ್ದಾಗಲೇ ಇನ್ನೊಬ್ಬಳು ಚಾಲಾಕಿ ಕಳ್ಳಿ ಸೈಲೆಂಟಾಗಿ ಆಭರಣದ ಪೆಟ್ಟಿಗೆಯನ್ನ ಮುಚ್ಚಿಟ್ಟುಕೊಂಡಿದ್ದಾಳೆ.
ಆ ನಂತರ ನೆಪ ಹೇಳಿ ಇಬ್ಬರೂ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇದೆಲ್ಲವೂ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಸಿಸಿ ಟಿವಿಯಲ್ಲಿ ಕಳ್ಳಿಯರನ್ನ ಗುರುತಿಸಿ ಅವರ ಹುಡುಕಾಟ ಆರಂಭಿಸಿದೆ ಗುಜರಾತ್ ಪೊಲೀಸ್. ಈಗ ಈ ಸಿಸಿ ಟಿವಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿರಾಜ್ ನೂರಾನಿ ಶೇರ್ ಮಾಡ್ಕೊಂಡಿದ್ದಾರೆ.
ಅದಕ್ಕೆ ಕ್ಯಾಪ್ಟನ್‌ನಲ್ಲಿ ‘ಆಭರಣದಂಗಡಿಯಿಂದ ಲಕ್ಷಾಂತರ ಮೌಲ್ಯದ ಆಭರಣ ಲೂಟಿ ಮಾಡಿದ ಚಾಲಾಕಿ ಕಳ್ಳಿಯರುʼ ಎಂದು ಬರೆದಿದ್ದಾರೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ನೋಡಿದವರೆಲ್ಲರೂ ಶಾಕ್ ಆಗಿದ್ದಾರೆ.
ಈ ಕಳ್ಳಿಯರು ದರೋಡೆಗೆ ಮುನ್ನ ಅಂಗಡಿ ಮಾಲೀಕರು ಮತ್ತು ಇತರ ಉದ್ಯೋಗಿಗಳ ನಂಬಿಕೆಯನ್ನು ಗೆಲ್ಲಲು ಸುಮಾರು 2 ಗ್ರಾಂ ತೂಕದ ಚಿನ್ನಾಭರಣಗಳನ್ನು ಖರೀದಿಸಿದ್ದಾರೆ. ಆ ನಂತರ ಮತ್ತೆ ಇನ್ನೇನೋ ನೆಪ ಮಾಡಿ ದೊಡ್ಡ ಮೊತ್ತದ ಆಭರಣ ಕದ್ದಿದ್ದಾರೆ.
ಈ ರೀತಿಯ ಪ್ರಕರಣ ಇಲ್ಲಿ ಇದೇ ಮೊದಲ ಬಾರಿ ನಡೆದಿರುವುದಲ್ಲ. ಈ ಹಿಂದೆಯೂ ಅನೇಕ ಕಡೆಗಳಲ್ಲಿ ಕಳ್ಳರು ಬೇರೆ-ಬೇರೆ ನೆಪ ಮಾಡಿ ತಮ್ಮ ಕೈಚಳಕ ತೋರಿಸಿದ್ದಾರೆ.