ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಸುದ್ದಿಗಳು ಆಗಾಗ ಕೇಳಿಬರುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪುರುಷನೊಬ್ಬನಿಗೆ ಮಹಿಳೆಯು ಅಸಹ್ಯಕರವಾಗಿ ವರ್ತಿಸಿರುವ ದೃಶ್ಯ ಸೆರೆಯಾಗಿದೆ.
ದೆಹಲಿಯ ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬಳು ರಿಕ್ಷಾ ಚಾಲಕನನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಮಾತ್ರವಲ್ಲದೆ ಅವನ ಕಡೆಗೆ ಲೈಂಗಿಕವಾಗಿ ಮುನ್ನಡೆದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋವನ್ನು ಅನಾಮಧೇಯ ಬಳಕೆದಾರರಿಂದ ರೆಡ್ಡಿಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಮಹಿಳೆಯು ಸಾರ್ವಜನಿಕವಾಗಿ ರಿಕ್ಷಾ ಚಾಲಕನನ್ನು ಲೈಂಗಿಕತೆಗೆ ಮುನ್ನಡೆಯುವಂತೆ ಮಾಡಲು ಮುಂದಾಗಿದ್ದಾಳೆ. ವಿಡಿಯೋದಲ್ಲಿ, ಮಹಿಳೆ ರಿಕ್ಷಾ ಚಾಲಕನ ಭುಜದ ಮೇಲೆ ತನ್ನ ತಲೆಯನ್ನಿಟ್ಟಿದ್ದು, ಅನುಚಿತವಾಗಿ ಮುಟ್ಟಿದ್ದಾಳೆ.
ಈ ವೇಳೆ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿದೆ. 28 ಸೆಕೆಂಡುಗಳ ವಿಡಿಯೋವನ್ನು ತಮ್ಮ ಕಾರಿನೊಳಗೆ ಕುಳಿತಿದ್ದ ಕೆಲವರು ಸೆರೆಹಿಡಿದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ಅಸಹ್ಯಕರ ಕೃತ್ಯಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
https://twitter.com/stormiismykid/status/1712810652094374239?ref_src=twsrc%5Etfw%7Ctwcamp%5Etweetembed%7Ctwterm%5E1712810652094374239%7Ctwgr%5E6671f99a9dc0f2bb96baab76567506eef4616e90%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Fcaughtoncamwomansexuallymolestsrickshawpulleronbusyroadnetizensreacttodisgustingact-newsid-n547605482
https://twitter.com/Urbandesii_/status/1713078990918082637?ref_src=twsrc%5Etfw%7Ctwcamp%5Etweetembed%7Ctwterm%5E1713078990918082637%7Ctwgr%5E6671f99a9dc0f2bb96baab76567506eef4616e90%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Fcaughtoncamwomansexuallymolestsrickshawpulleronbusyroadnetizensreacttodisgustingact-newsid-n547605482