ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಟ್ರಕ್ ನಿಯಂತ್ರಣ ಕಳೆದುಕೊಂಡು ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದ ನಂತರ ಕರ್ತವ್ಯದಲ್ಲಿದ್ದ ನಾಲ್ವರು ಟ್ರಾಫಿಕ್ ಪೊಲೀಸರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆಘಾತಕಾರಿ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.
ಶಿವಶಕ್ತಿ ಫೈನಾನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ವೀರಮಣಿ ತನ್ನ ಸಹೋದ್ಯೋಗಿಗಳಾದ ಕೃಷ್ಣನ್ ಮತ್ತು ಮುರುಗೇಶ್ ಅವರೊಂದಿಗೆ ಬಂದಿದ್ದರು. ಅವರು ಅಟ್ಟೈಯಂಪಾಳ್ಯದ ಅಂಗಡಿಯೊಂದರಲ್ಲಿ ಟೀ ಕುಡಿಯುತ್ತಿದ್ದಾಗ ಮಂಗರಸಾವಲಯಪಾಳ್ಯದ ಕುಮರೇಶನ್ ಎಂಬಾತನ ಜೊತೆ ಬಾಕಿಯಿರುವ ಮಾಸಿಕ ಲೋನ್ ಬಗ್ಗೆ ಜಗಳ ಶುರು ಮಾಡಿದರು.
ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಮುರುಗೇಶ್ ಟ್ರಕ್ ತೆಗೆದುಕೊಂಡು ಚಲಾಯಿಸಿದ್ದಾನೆ. ಟ್ರಕ್‌ನ ನಿಯಂತ್ರಣವನ್ನು ಕಳೆದುಕೊಂಡು ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಇನ್ನೇನು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಯುವಷ್ಟರಲ್ಲಿ ಟ್ರಾಫಿಕ್ ಕರ್ತವ್ಯದಲ್ಲಿದ್ದ ಮೂವರು ಪೊಲೀಸರು ಪಾರಾದರು. ಈ ಬಗ್ಗೆ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.