alex Certify ಮಾಲ್​ನಲ್ಲಿ ಗಿಡ ಕದಿಯುತ್ತಿದ್ದಾಗ ಕ್ಯಾಮರಾದಲ್ಲಿ ಸೆರೆಸಿಕ್ಕ ವೃದ್ಧ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲ್​ನಲ್ಲಿ ಗಿಡ ಕದಿಯುತ್ತಿದ್ದಾಗ ಕ್ಯಾಮರಾದಲ್ಲಿ ಸೆರೆಸಿಕ್ಕ ವೃದ್ಧ ದಂಪತಿ

ಕಳ್ಳತನ ಮಾಡುವ ಸನ್ನಿವೇಶ ಕ್ಯಾಮರಾದಲ್ಲಿ ಸೆರೆಯಾದ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ, ಶಾಪಿಂಗ್​ ಮಾಲ್​ನ ಒಳಗಿನಿಂದ ವೃದ್ಧ ದಂಪತಿ ಗಿಡ ಕದಿಯುತ್ತಿರುವುದನ್ನು ತೋರಿಸುವ ಇದೇ ರೀತಿಯ ವೀಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆ ವೃದ್ಧ ದಂಪತಿ ಗಿಡ ಕದಿಯುತ್ತಿರುವಾಗ ಒಬ್ಬಾತ ರೆಕಾರ್ಡ್​ ಮಾಡಿದ್ದು, ಇದರ ಸುಳಿವು ಅವರಿಬ್ಬರಿಗೂ ಇರಲಿಲ್ಲ. ಪ್ಯೂಬಿಟಿಯ ಇನ್​ಸ್ಟಾಗ್ರಾಮ್​ ಪುಟದಲ್ಲಿ ಹಂಚಿಕೊಳ್ಳಲಾದ ಘಟನೆಯ ವೀಡಿಯೊ ಕೆಲವೇ ಸಮಯದಲ್ಲಿ ವೆೈರಲ್​ ಆಗಿದೆ.

ಎಸ್ಕಲೇಟರ್​ನ ಪಕ್ಕದಲ್ಲಿ ಇಡಲಾಗಿದ್ದ ಪಾಟ್​ನ ಪಕ್ಕದಲ್ಲೇ ವಯಸ್ಸಾದ ದಂಪತಿ ನಿಂತಿರುವಲ್ಲಿಂದ ಕ್ಲಿಪ್​ ಪ್ರಾರಂಭವಾಗುತ್ತದೆ. ಇಬ್ಬರು ವಾತಾವರಣ ಶಾಂತವಾಗಿದೆಯೇ ಎಂದು ಸುತ್ತಲೂ ನೋಡುತ್ತಾರೆ. ಯಾರೂ ತಮ್ಮನ್ನು ಗಮನಿಸುತ್ತಿಲ್ಲ ಎಂದು ಖಚಿತಪಡಿಸಿಕೊಂಡರು.

ಮಹಿಳೆ ತನ್ನ ಪರ್ಸ್​ನಿಂದ ಪೇಪರ್​ ಬ್ಯಾಗ್​ ತೆಗೆದು ಸರಸರನೆ ಗಿಡದ ಒಂದು ಸಣ್ಣ ಭಾಗವನ್ನು ಮುರಿದು ತುರುಕಿಕೊಂಡು ಹೆಚ್ಚಿನ ಗಿಡದ ಭಾಗವನ್ನು ಹಾಗೇ ಬಿಡುತ್ತಾರೆ. ತಮ್ಮ ಪ್ಲಾನ್​ ಪೂರ್ಣಗೊಳಿಸಿದ ನಂತರ, ವೃದ್ಧ ದಂಪತಿಗಳು ಸದ್ದಿಲ್ಲದೆ ಹೊರನಡೆದರು.
ಘಟನೆಯನ್ನು ರೆಕಾರ್ಡ್​ ಮಾಡುವಲ್ಲಿ ಯಶಸ್ವಿಯಾದ ಪ್ರೇಕ್ಷಕ ವೀಡಿಯೊಗೆ “ಅಜ್ಜಿ ಮಾಲ್​ನಿಂದ ಗಿಡ ಕದಿಯುತ್ತಿದ್ದಾರೆ ಎಂದು ಶಿರ್ಷಿಕೆೆ ನೀಡಿ ಪೋಸ್ಟ್​ ಮಾಡಿದ್ದಾರೆ.

ಈ ವಿಡಿಯೋ ಎಷ್ಟು ವೆೈರಲ್​ ಆಗಿದೆ ಎಂದರೆ ಅದು ಬಾಲಿವುಡ್​ ನಟಿ ಇಶಾ ಗುಪ್ತಾ ಅವರ ಗಮನವನ್ನು ಸೆಳೆದಿದೆ, ಅವರು ಕ್ಲಿಪ್​ ಲೈಕ್​ ಮಾಡಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಲೈಕ್​ ಗಳಿಸಿದೆ. ನೆಟ್ಟಿಗರು ಇದನ್ನು ಕಂಡು ಉಲ್ಲಾಸದಾಯಕ ಕಾಮೆಂಟ್​ ಮಾಡಿದ್ದಾರೆ.
“ಇದು ಶತಮಾನದ ದರೋಡೆ” ಎಂದು ಒಬ್ಬರು ಬರೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...