
ತನ್ನ ತಮ್ಮನೊಂದಿಗೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ಆಯೆಶಾ ಎಂಬ ಬಾಲಕಿ ಮೇಲೆ ಹಸು ಹೀಗೆ ದಾಳಿ ಮಾಡಿದೆ. ಆಯೆಶಾ ತಮ್ಮನ ಜೊತೆ ಬರುವಾಗ ಇದ್ದಕ್ಕಿದ್ದಂತೆ ನುಗ್ಗಿದ ಹಸು ಆಯೆಶಾಳನ್ನು ಕೊಂಬಿನಿಂದ ಎತ್ತಿ ಬಿಸಾಡಿ ಆಕೆಯ ಮೇಲೆ ದಾಳಿ ಮಾಡಿದೆ.
ಬಾಲಕಿ ಚೀರಿಕೊಂಡ ಸದ್ದನ್ನು ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಹಸುವನ್ನು ಅಲ್ಲಿಂದ ಓಡಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಹಸುವನ್ನು ಚೆನ್ನೈ ಮಹಾನಗರ ಪಾಲಿಕೆ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಅದರ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.