ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತಾವು ಸಂಪನ್ನಗುಣಶೀಲರೆಂದು ತೋರಿಸಿಕೊಳ್ಳುವ ಶೋಕಿ ಸಾಮಾನ್ಯವಾಗಿಬಿಟ್ಟಿದೆ.
ಇಂಥದ್ದೇ ಮನಃಸ್ಥಿತಿಯ ವ್ಯಕ್ತಿಯೊಬ್ಬರು ಪ್ರವಾಹ ಪೀಡಿತ ಪ್ರದೇಶವೊಂದರಲ್ಲಿ ಸಂಕಟಕ್ಕೆ ಸಿಲುಕಿದ ಮಂದಿಗೆ ಸಹಾಯ ಮಾಡುತ್ತಿರುವೆ ಎಂದು ಹೇಳಿಕೊಳ್ಳಲು ಮುಖಕ್ಕೆಲ್ಲಾ ಮಣ್ಣು ಮೆತ್ತಿಕೊಂಡು ನಾಟಕ ಮಾಡುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.
ಜರ್ಮನಿಯ ಸುದ್ದಿ ವಾಹಿನಿಯೊಂದರಲ್ಲಿ ವರದಿಗಾರಿಕೆ ಮಾಡುವ 39 ವರ್ಷದ ಸುಸಾನ್ನಾ ಒಲೆನ್ ಹೆಸರಿನ ಈಕೆಯ ’ಸಾಹಸ’ವನ್ನು ರೆಡ್‌ಹ್ಯಾಂಡ್ ಆಗಿ ಸೆರೆ ಹಿಡಿದ ದಾರಿಹೋಕರೊಬ್ಬರು ಈ ದೃಶ್ಯದ ವಿಡಿಯೋ ಮಾಡಿಕೊಂಡಿದ್ದಾರೆ.
BIG BREAKING: 6 ತಿಂಗಳು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಕೆ ಮಾಡಿ; ನಿಡುಮಾಮಿಡಿ ಶ್ರೀಗಳು
ಕೇಂದ್ರ ಯೂರೋಪ್‌ನ ಬೆಲ್ಜಿಯಂ ಹಾಗೂ ಜರ್ಮನಿಯ ಪ್ರವಾಹಪೀಡಿತ ಪರಿಸ್ಥಿತಿಯ ದೃಶ್ಯವೊಂದರ ವರದಿಗಾರಿಕೆ ಮಾಡುವ ವೇಳೆ ಈ ಓವರ್ ಬಿಲ್ಡಪ್ ತೆಗೆದುಕೊಳ್ಳಲು ಮುಂದಾದ ವರದಿಗಾರ್ತಿ ಈಗ ನೆಟ್ಟಿಗರಿಗೆ ಹಾಸ್ಯದ ವಸ್ತುವಾಗಿದ್ದಾರೆ.
ಸುಸಾನ್ನಾ ಕೆಲಸ ಮಾಡುವ ಆರ್‌ಟಿರಲ್ ವಾಹಿನಿಯ ಆಡಳಿತಕ್ಕೆ ವಿಷಯ ಮುಟ್ಟಿದ ಮೇಲೆ ಆಕೆಯನ್ನು ಸದ್ಯಕ್ಕೆ ರಜೆಯ ಮೇಲೆ ಕಳುಹಿಸಲಾಗಿದೆ.
“ನಮ್ಮ ವರದಿಗಾರ್ತಿಯು ಪತ್ರಿಕೋದ್ಯಮದ ನೀತಿಗಳನ್ನು ಹಾಗೂ ನಮ್ಮದೇ ಸಂಸ್ಥೆಯ ಶಿಸ್ತನ್ನು ಉಲ್ಲಂಘಿಸಿದ್ದಾರೆ. ಈ ವಿಷಯ ತಿಳಿಯುತ್ತಲೇ ಆಕೆಗೆ ಸೋಮವಾರದಿಂದ ಕೆಲಸಕ್ಕೆ ರಜೆ ನೀಡಿದ್ದೇವೆ” ಎಂದು ವಾಹಿನಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
https://twitter.com/Eddie_1412/status/1418169326335582214?ref_src=twsrc%5Etfw%7Ctwcamp%5Etweetembed%7Ctwterm%5E1418169326335582214%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-video-german-reporter-smears-mud-to-show-she-helped-cleaning-up-after-floods%2F789682