alex Certify ಹಸುಗಳ ಸಾಗಣೆ ಮತ್ತು ಸ್ವಾಧೀನ ಗೋಹತ್ಯೆ ಕಾಯ್ದೆಯಡಿ ಬರುವುದಿಲ್ಲ: ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುಗಳ ಸಾಗಣೆ ಮತ್ತು ಸ್ವಾಧೀನ ಗೋಹತ್ಯೆ ಕಾಯ್ದೆಯಡಿ ಬರುವುದಿಲ್ಲ: ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ

ರಾಜ್ಯದೊಳಗೆ ಹಸುಗಳ ಸಾಗಣೆ ಮತ್ತು ಸ್ವಾಧೀನ ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯಿದೆ 1955 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಅವಲೋಕನದ ಬಳಿಕ ನ್ಯಾಯಮೂರ್ತಿ ವಿಕ್ರಮ್ ಡಿ ಚೌಹಾಣ್ ಅವರು, ಕುಶಿನಗರ ಜಿಲ್ಲೆಯ ಕುಂದನ್ ಯಾದವ್ ಅವರಿಗೆ ಜಾಮೀನು ಮಂಜೂರು ಮಾಡಿದರು. ಅವರು ಯಾವುದೇ ಹಸು ಅಥವಾ ಅದರ ಸಂತತಿಗೆ ಹಾನಿ ಮಾಡಿದ ಅಥವಾ ಅದರ ವಧೆ ಮಾಡಿದ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಕೋರ್ಟ್ ಜಾಮೀನು ನೀಡಿದೆ.

ಯಾವುದೇ ದೈಹಿಕ ಗಾಯದ ಲಕ್ಷಣಗಳಿಲ್ಲದ ಆರು ಹಸುಗಳನ್ನು ವಾಹನದಿಂದ ವಶಪಡಿಸಿಕೊಂಡ ನಂತರ ಕುಂದನ್ ಯಾದವ್ ರನ್ನು ಬಂಧಿಸಿ ಸುಮಾರು ಮೂರು ತಿಂಗಳ ಕಾಲ ಜೈಲಿನಲ್ಲಿಡಲಾಗಿತ್ತು. ಉತ್ತರಪ್ರದೇಶ ಗೋಹತ್ಯೆ ತಡೆ ಕಾಯಿದೆ 1955 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ 1960 ರ ಅಡಿಯಲ್ಲಿ ಅವರನ್ನು ಜೈಲಿಗೆ ಹಾಕಲಾಗಿತ್ತು.

ಕುಂದನ್ ಯಾದವ್ ಅವರ ಜಾಮೀನು ಅರ್ಜಿಯನ್ನು ಅನುಮತಿಸುವ ಸಂದರ್ಭದಲ್ಲಿ “ಕೇವಲ ಜೀವಂತ ಹಸು / ಗೂಳಿಯನ್ನು ರಾಜ್ಯದೊಳಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದು ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯಿದೆ 1955 ರ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದ್ದರಿಂದ ಯುಪಿ ರಾಜ್ಯದೊಳಗೆ ಕೇವಲ ಹಸುಗಳನ್ನು ಸಾಗಿಸುವುದು ಸದರಿ ಕಾಯ್ದೆಯ ಅಡಿಯಲ್ಲಿ ಕುಮ್ಮಕ್ಕು ನೀಡುವುದು ಅಥವಾ ಅಪರಾಧವನ್ನು ಮಾಡಲು ಪ್ರಯತ್ನಿಸುವುದು ಎಂದರ್ಥವಲ್ಲ. ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...