83 ವರ್ಷ ವೃದ್ಧಳಾದ ತನ್ನ ಒಡತಿಯು ಮನೆಯ ಬಳಿಯ ಪ್ರಪಾತಕ್ಕೆ ಬಿದ್ದಿರುವ ಕುರಿತು ಪೊಲೀಸರು ಮತ್ತು ರಕ್ಷಣಾ ತಂಡಕ್ಕೆ ಬೆಕ್ಕೊಂದು ಸುಳಿವು ನೀಡಿರುವ ಬ್ರಿಟನ್ ನ ಬಾಡ್‍ಮಿನ್ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಒಡತಿಯು ಆಯತಪ್ಪಿ ಮನೆ ಬಳಿಯಲ್ಲಿನ ಬಳ್ಳಿಗಳಿಂದ ಸುತ್ತುವರಿದ ಪ್ರಪಾತಕ್ಕೆ ಬಿದ್ದಿದ್ದಾಳೆ. ಮೊದಲು ಮನೆಯೆಲ್ಲಾ ಹುಡುಕಿದ ಬೆಕ್ಕು, ಕೊನೆಗೆ ಕಿಟಕಿಯಿಂದ ಹೊರಜಿಗಿದು ಪ್ರಪಾತದಲ್ಲಿ ನರಳುತ್ತಿದ್ದ ಒಡತಿಯನ್ನು ಕಂಡಿದೆ. ಕೂಡಲೇ ಮಿಯಾಂವ್ ಎಂದು ಕೂಗಲು ಆರಂಭಿಸಿದ ಬೆಕ್ಕು, ಸತತ ಎರಡು-ಮೂರು ಗಂಟೆಗಳ ಕಾಲ ಮನೆಯ ಸುತ್ತಲೂ ಕೂಗಾಡುತ್ತಲೇ ಓಡಾಡಿದೆ.
BIG NEWS: ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ದಾಳಿ ಖಂಡನೀಯ; ತಾಲಿಬಾನ್ ಅಟ್ಟಹಾಸಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಕಿಡಿ
ದಾರಿಹೋಕರೊಬ್ಬರು ಬೆಕ್ಕಿಗೆ ಅಪಾಯವಾಗಿದೆಯೇ ಎಂದು ತಿಳಿಯಲು ಮನೆಯ ಹತ್ತಿರ ಬಂದಾಗ ಅವರನ್ನು ಪ್ರಪಾತದ ಬಳಿಗೆ ಕರೆದೊಯ್ದಿದೆ ಬೆಕ್ಕು. ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿ, ರಕ್ಷಣೆಗೆ ಮನವಿ ಮಾಡಿದ್ದಾರೆ. ‘ಪಿರನ್’ ಹೆಸರಿನ ಬೆಕ್ಕಿನ ಕಾಳಜಿ ಮತ್ತು ನಿಷ್ಠೆಗೆ ಪೊಲೀಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.