
ಅಂಗಡಿ ಅಥವಾ ಯಾವುದೇ ಸ್ಥಳವಾಗಿರಬಹುದು ಇಟ್ಟಿದ್ದ ವಸ್ತುಗಳು ಕಾಣೆಯಾದ್ರೆ ಅಥವಾ ಹಾಳಾದ್ರೆ ಅರೆ ಇದೇನಾಯ್ತು ಅಂತಾ ಗೊಂದಲಗೊಳ್ಳೋದು ಸಾಮಾನ್ಯ. ಸ್ಥಳದಲ್ಲಿ ಸಿಸಿ ಟಿವಿ ಏನಾದ್ರೂ ಇದ್ರೆ. ಏನಾಯ್ತು ಅನ್ನೋದು ತಿಳಿಯುತ್ತೆ. ಇದೀಗ ಬೆಕ್ಕಿನ ಅಪರಾಧವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಪಾಪ.. ಬೆಕ್ಕು ತಪ್ಪಿತಸ್ಥನಲ್ಲ ಎಂದು ಹೇಳಿದ್ದಾರೆ.
ಹೌದು, ಬೆಕ್ಕೊಂದು ಡಿಪಾರ್ಟ್‌ಮೆಂಟಲ್ ಸ್ಟೋರ್‌ನ ಕೌಂಟರ್‌ನಲ್ಲಿ ಮೊಟ್ಟೆ ತುಂಬಿದ ಟ್ರೇಗೆ ಒರಗಿಕೊಂಡು ವಿಶ್ರಾಂತಿ ಪಡೆಯುತ್ತಿತ್ತು. ಇದ್ದಕ್ಕಿದ್ದಂತೆ ಬೆಕ್ಕು ತಿರುಗಲು ಪ್ರಯತ್ನಿಸುತ್ತದೆ. ಈ ವೇಳೆ ಮೊಟ್ಟೆ ತುಂಬಿದ್ದ ಟ್ರೇ ಜೊತೆಗೆ ಬೆಕ್ಕು ಕೆಳಗೆ ಬಿದ್ದಿದೆ. ಪರಿಣಾಮ ಮೊಟ್ಟೆ ಚೂರು ಚೂರಾಗಿವೆ.
ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದೆ. ಬೆಕ್ಕು ತುಂಬಾ ನಿರುಪದ್ರವಿ ಮತ್ತು ಮುದ್ದಾಗಿದೆ. ಅದನ್ನು ಶಿಕ್ಷಿಸುವ ಬಗ್ಗೆ ಯೋಚಿಸುತ್ತಿದ್ದರೆ, ಆ ರೀತಿ ಮಾಡದಿರಿ ಎಂದೆಲ್ಲಾ ನೆಟ್ಟಿಗರು ಮನವಿ ಮಾಡಿದ್ದಾರೆ.