ವರ್ಜೀನಿಯಾದ ಬೆಕ್ಕೊಂದು ತನ್ನ ತೂಕದ ಕಾರಣ ಭಾರೀ ಸುದ್ದಿಯಲ್ಲಿದೆ. ಪ್ಯಾಚಸ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಈ ಬೆಕ್ಕು 18.2 ಕೆಜಿಯಷ್ಟು ತೂಕವಿದೆ.
ನಾಲ್ಕು ವರ್ಷದ ಮಗುವಿನಷ್ಟು ತೂಕವಿರುವ ಈ ಬೆಕ್ಕಿನ ಚಿತ್ರಗಳನ್ನು ಸೆರೆ ಹಿಡಿದು ಫೇಸ್ಬುಕ್‌ನಲ್ಲಿ ಶೇರ್ ಮಾಡಿದ್ದಾರೆ ರಿಚ್ಮಂಡ್ ಅನಿಮಲ್ ಕೇರ್ ಅಂಡ್ ಕಂಟ್ರೋಲ್ ಸಂಸ್ಥೆಯವರು.
ಬೆಳ್ಳನೆಯ ಚರ್ಮ ಹಾಗೂ ಕಂದು ಬಾಲದೊಂದಿಗೆ ಆಕರ್ಷಕವಾಗಿ ಕಾಣುವ ಈ ಬೆಕ್ಕು ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳನ್ನು ನೋಡಿದ ಕೇ ಫೋರ್ಡ್ ಹೆಸರಿನ ಮಹಿಳೆಯೊಬ್ಬರು ಪ್ಯಾಚಸ್‌ನನ್ನು ದತ್ತು ಪಡೆದುಕೊಂಡಿದ್ದಾರೆ. ತಮ್ಮ ಮುದ್ದಿನ ಬೆಕ್ಕಿನೊಂದಿಗೆ ಫೋಟೋ ತೆಗೆದುಕೊಂಡಿರುವ ಫೋರ್ಡ್, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.