
ತನ್ನ ಮುದ್ದಿನ ಸಾಕುಬೆಕ್ಕು ಸಾವನ್ನಪ್ಪಿದ ಕಾರಣಕ್ಕೆ ಮನ್ನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.
ಪೂಜಾ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ತನ್ನ ಪ್ರೀತಿಯ ಬೆಕ್ಕು ಸಾವನ್ನಪ್ಪಿದ ಆಘಾತದಿಂದ ಪೂಜಾ ತೀವ್ರವಾಗಿ ಮನನೊಂದಿದ್ದರು. ಬೆಕ್ಕು ಮತ್ತೆ ಬದುಕಬಹುದು ಎಂದು ಎರಡು ದಿನಗಳ ಕಾಲ ಕಾದಿದ್ದರು. ಆದರೆ ಬೆಕ್ಕು ಬದುಕಿಬಂದಿಲ್ಲ. ನೊಂದ ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಟು ವರ್ಷಗಳ ಹಿಂದೆ ದೆಹಲಿ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದ ಪೂಜಾ ದಂಪತಿ ಎರಡು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಬಳಿಕ ಪೂಜಾ ತನ್ನ ತಾಯಿ ಗಜ್ರಾದೇವಿ ಜೊತೆ ತಂದೆಯ ಮನೆಯಲ್ಲಿ ವಾಸವಾಗಿದ್ದರು.
ಈ ವೇಳೆ ಪೂಜಾ ಬೆಕ್ಕೊಂದನ್ನು ಸಾಕಿದ್ದರು. ಬಹಳ ಮುದ್ದಿನಿಂದ ಸಾಕಿದ್ದ ಬೆಕ್ಕು ಏಕಾಏಕಿ ಎರಡು ದಿನಗಳ ಹಿಂದೆ ಸಾವನ್ನಪ್ಪಿದೆ. ಬೆಕ್ಕು ಸಾವನ್ನಪ್ಪಿದೆ ಅದನ್ನು ಹೂಳುವಂತೆ ಪೂಜಾ ತಾಯಿ ಹೇಳಿದ್ದರೂ, ಇಲ್ಲ ಅದು ಮತ್ತೆ ಬದುಕಿ ಬರುತ್ತೆ ಎಂದು ಪೂಜಾ ವಾದಿಸಿದ್ದರು. ಆದರೆ ಎರಡು ದಿನ ಕಳೆದರೂ ಬೆಕ್ಕು ಬದುಕಿಲ್ಲ. ಇನಷ್ಟು ಮನನೊಂದ ಪೂಜಾ ತನ್ನ ಕೋಣೆಯಲ್ಲಿ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.