ಬೆಂಗಳೂರು: ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.
ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರು ಎಸ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಪತಿಯ ಪರಿಶಿಷ್ಟ ವರ್ಗವೇ ತನಗೂ ಅನ್ವಯವಾಗುತ್ತದೆ ಎಂದು ವಾದಿಸಿದ್ದರು. ಸಿವಿಲ್ ಕೋರ್ಟ್ ಸದಸ್ಯೆ ಆಯ್ಕೆ ಅಸಿಂಧುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗ್ರಾಪಂ ಸದಸ್ಯೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಸಾಮಾನ್ಯವಾಗಿ ತಂದೆಯ ಜಾತಿಯನ್ನು ಮಕ್ಕಳು ಪಡೆಯುತ್ತಾರೆ. ಜನ್ಮದ ಆಧಾರದ ಮೇಲೆ ಜಾತಿ ನಿರ್ಧಾರವಾಗುತ್ತದೆ. ಹೀಗಾಗಿ ಪತಿಯ ಜಾತಿಯನ್ನು ಪತ್ನಿಗೆ ಅನ್ವಯಿಸಲಾಗದು ಎಂದು ಗ್ರಾಮ ಪಂಚಾಯಿತಿ ಸದಸ್ಯೆ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.