ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಸರ್ಕಾರ ಅಕ್ಕಿ ನೀಡುತ್ತಿದ್ದು, ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಂದ ಜಾತಿ ಪ್ರಮಾಣ ಪತ್ರ ಪಡೆಯಲು ಮುಂದಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಾರ್ಯದರ್ಶಿಗಳ ಸೂಚನೆ ಅನ್ವಯ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯಲು ಜಾತಿ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ.
ಕೆವೈಸಿ ನೆಪದಲ್ಲಿ ಜುಲೈನಿಂದಲೇ ಜಾತಿ ಪ್ರಮಾಣ ಪತ್ರ ಸಂಗ್ರಹಣೆ ನಡೆದಿದೆ. ಈಗ ಮತ್ತೊಮ್ಮೆ ನವೀಕರಣ ಹೆಸರಲ್ಲಿ ಫಲಾನುಭವಿಗಳಿಗೆ ಜಾತಿ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಕೆವೈಸಿ ಮಾಡಿಸುವಾಗಲೇ ಬಹುತೇಕ ಪ್ರಮಾಣ ಪತ್ರ ಸಂಗ್ರಹಿಸಲಾಗಿದ್ದು, ಇಲಾಖೆ ಅಂಕಿ ಅಂಶಗಳಿಗಾಗಿ ಉಳಿದ ಪರಿಶಿಷ್ಟ ಫಲಾನುಭವಿಗಳ ವಿವರ ಸಂಗ್ರಹಿಸಲಾಗುತ್ತಿದೆ. ರಾಜ್ಯಾದ್ಯಂತ 25,31,485 ಪರಿಶಿಷ್ಟ ಪಲಾನುಭವಿಗಳನ್ನು ಗುರುತಿಸಲಾಗಿದೆ. ಬಿಟ್ಟು ಹೋಗಿರುವ ಫಲಾನುಭವಿಗಳ ಪತ್ತೆಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.