ಮೈಸೂರು: ಜಾತಿಗಣತಿಯನ್ನು ಜಾರಿ ಮಾಡೇ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತಿಗಣತಿ ಜಾರಿ ನಮ್ಮ ಪಕ್ಷದ ಅಜೆಂಡಾ. ಹಾಗಾಗಿ ಜಾತಿಗಣತಿಯನ್ನು ಜಾರಿ ಮಾಡೇ ಮಾಡುತ್ತೇನೆ ಎಂದರು.
ಈಗಾಗಲೇ ಜಾತಿಗಣತಿ ವರದಿ ನನ್ನ ಕೈಸೇರಿದೆ. ನಾನಿನ್ನೂ ಅದನ್ನು ಪೂರಿಪೂರ್ಣವಾಗಿ ನೊಡಿಲ್ಲ. ಮುಂದಿನ ದಿನಗಳಲ್ಲಿ ಕ್ಯಾಬಿನೆಟ್ ಗೆ ಇಟ್ಟು ಜಾತಿಗಣತಿ ಜಾರಿಗೆ ತರುತ್ತೇವೀ ಎಂದು ಹೇಳಿದರು.