ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಪ್ರಕಾಶ್ ಹೆಗಡೆ ಮಾಹಿತಿ ನೀಡಿದ್ದಾರೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯ ನೀಡಿದ್ದು, ವರದಿ ಸಲ್ಲಿಸಲಾಗುವುದು. ಈ ಹಿಂದೆ ಕಾಂತರಾಜ್ ಅಧ್ಯಕ್ಷರಾಗಿದ್ದ ದತ್ತಾಂಶದ ಆಧಾರದ ಮೇಲೆ ವರದಿ ನೀಡುವಂತೆ ಸರ್ಕಾರ ಹೇಳಿದ್ದು, ಅದರಂತೆ ವರದಿ ಸಿದ್ದಪಡಿಸಲಾಗಿದೆ. 2015 -16ರಲ್ಲಿ ಕಾಂತರಾಜು ಸಮಿತಿ ನಡೆಸಿದ್ದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆಧಿರಿಸಿ ಸಿದ್ಧಪಡಿಸಿದ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ
ರಾಜ್ಯದಲ್ಲಿ ಮನೆ ಮನೆಗೆ ಪ್ರತಿ ಕುಟುಂಬ ಸದಸ್ಯರು, ಉದ್ಯೋಗ, ಜಾತಿ, ಶಿಕ್ಷಣ, ಆಸ್ತಿ ಸೇರಿ 54 ಪ್ರಶ್ನೆಗಳನ್ನು ಕೇಳಿದ ಅಂಕಿ ಅಂಶ ಸಂಗ್ರಹಿಸಲಾಗಿತ್ತು. ಈ ವರದಿ ಆಧಾರದ ಮೇಲೆ ಜನರಿಗೆ ಮುಂದಿನ ದಿನಗಳಲ್ಲಿ ಅಗತ್ಯ ಸೌಕರ್ಯ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.