ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಸಲು ‘ಬಿಗ್ ಬಾಸ್’ ಮನೆಗೆ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.
ಮಾತಿನ ಭರದಲ್ಲಿ ಅವರು ಬಳಸಿದ ಆ ಒಂದು ಪದದಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಡ್ಡ ಎಂಬ ಪದ ಬಳಕೆ ಹಿನ್ನೆಲೆ ಅವರ ವಿರುದ್ಧ ಕೇಸ್ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಲು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ವಿಚಾರಣೆ ನಡೆಸಿದ್ದಾರೆ.
ಹುಲಿ ಉಗುರು ಧರಿಸಿದ್ದ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಿಂದಲೇ ಬಂಧನಕ್ಕೊಳಗಾಗಿದ್ದರು. ನಂತರ ಜಾಮೀನಿನ ಮೇಲೆ ರಿಲೀಸ್ ಆಗಿದ್ದರು. ಈ ಬಳಿಕ ಹುಲಿ ಉಗುರು ವಿವಾದ ರಾಜ್ಯದಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ತನಿಷಾ ಕುಪ್ಪಂಡಗೆ ಸಂಕಷ್ಟ ಎದುರಾಗಿದೆ.
ಬೋವಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ಎರಡು ದೂರುಗಳು ದಾಖಲಾಗಿದೆ.ಬಿಗ್ ಬಾಸ್ ಮನೆಯಲ್ಲಿರುವ ನಟಿ ತನಿಶಾ ಮೇಲೆ ಜಾತಿ ನಿಂದನೆ ವಿಚಾರವಾಗಿ ಎಸ್ ಸಿ ಎಸ್ ಟಿ ಕಾಯಿದೆಯಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಈ ಮೊದಲು ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು, ಡ್ರೋನ್ ಪ್ರತಾಪ್ ಹಾಗೂ ತನಿಷಾ ನಡುವೆ ನಡೆದ ಸಂಭಾಷಣೆ ವೇಳೆ ತನಿಷಾ ‘ವಡ್ಡ’ ಎಂಬ ಪದ ಬಳಕೆ ಮಾಡಿದ್ದಾರೆ, ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ . ಪದ್ಮಾ ಈ ದೂರು ನೀಡಿದ್ದರು. ಹಾಗೂ, ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಪೊಲೀಸರು ಬಿಗ್ ಬಾಸ್ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದರು.