ಬೆಂಗಳೂರು: ಹಿಂದುಳಿದ ಜಾತಿಗಳ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಸಲ್ಲಿಕೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಸಮಯ ಕೋರಲಾಗಿದೆ.
ಗುರುವಾರ ಬೆಳಗ್ಗೆ ಮುಖ್ಯಮಂತ್ರಿಗಳು ಸಮಯ ನೀಡಿ ವರದಿ ಸ್ವೀಕರಿಸುವ ಸಾಧ್ಯತೆ ಇದೆ. ಕಾಂತರಾಜು ಆಯೋಗದ ವರದಿ ದತ್ತಾಂಶ ಬಳಸಿಕೊಂಡು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ವರದಿ ಸಿದ್ದಪಡಿಸಿದೆ. ಜಯಪ್ರಕಾಶ್ ಹೆಗಡೆ ನೇತೃತ್ವದ ಸಮಿತಿ ಅವಧಿಯನ್ನು ಎರಡು ಸಲ ವಿಸ್ತರಿಸಲಾಗಿದ್ದು, ಫೆಬ್ರವರಿ 29ಕ್ಕೆ ಅವಧಿ ಮುಕ್ತಾಯವಾಗಲಿದೆ.
ಸಮಿತಿ ತನ್ನ ವರದಿ ಸಿದ್ದಪಡಿಸಿ ಅವಧಿ ಮುಗಿಯುವ ಮೊದಲೇ ಸಲ್ಲಿಕೆಗೆ ಕ್ರಮ ಕೈಗೊಂಡಿದೆ. ಸಿಎಂ ಬಳಿ ಸಮಯ ಕೋರಿದ್ದು, ಅವರು ಸಮಯ ನೀಡಿದಲ್ಲಿ ನಾಳೆ ಬೆಳಿಗ್ಗೆ ವರದಿ ಸಲ್ಲಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.