‘ಕಾಸ್ಟ್ ಅವೇ’ ಈ ಹಾಲಿವುಡ್ ಸಿನಿಮಾ ನೋಡಿ ದಂಗಾದವರೇ ಹೆಚ್ಚು. ವ್ಯಕ್ತಿಯೊಬ್ಬ ಸಾಗರದ ನಟ್ಟ ನಡುವೆ ಇದ್ದ ದ್ವೀಪದಲ್ಲಿ ಏಕಾಂಗಿಯಾಗಿ ಸಿಕ್ಕಾಕಿಕೊಂಡಿದ್ದು ಹೇಗೆ ? ಆ ಸಮಯದಲ್ಲಿ ಆತ ಪಟ್ಟ ಕಷ್ಟ ಏನೇನು ? ಜೊತೆಗೆ ಆತ ಮತ್ತೆ ದಡ ಸೇರಿದ್ದು ಹೇಗೆ ? ಅನ್ನೊದನ್ನ ಈ ಸಿನೆಮಾದಲ್ಲಿ ಎಳೆಎಳೆಯಾಗಿ ತೋರಿಸಿದ್ದರು. ಇದೇ ಸಿನೆಮಾ ಕಥೆ ಈಗ ವಾಸ್ತವದಲ್ಲಿ ನಡೆದಿದೆ.
21 ವರ್ಷದ ಡೈಲನ್ ಗಾರ್ಟೆನ್ ಮೇಯರ್ ಫ್ಲೋರಿಡಾದಲ್ಲಿ ಮುಕ್ತವಾಗಿ ಈಜುತ್ತಿದ್ದಾಗ, ಅವರು ಸುಳಿಯೊಂದರಲ್ಲಿ ಸಿಕ್ಕಾಕಿಕೊಂಡರು. ಆಗ ಅವರು ಕಷ್ಟಪಟ್ಟು ದಡಕ್ಕೆ ಬರಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಆದರೂ ಅವರು ಒಂದೇ ಸಮನೆ ಈಜಾಡುತ್ತಲೇ ಇದ್ದರು. ಆ ಸಮಯದಲ್ಲಿ ಅವರು ಕಡಿಮೆ ಅಂದರೂ 2 ಕಿ.ಮೀ. ದೂರ ಈಜಿದ್ದಾರೆ.
ನಿರಂತರವಾಗಿ ಈಜುತ್ತಿದ್ದರಿಂದ ಅವರು ಸುಸ್ತಾಗಿ ಹೋಗಿದ್ದರು. ನಿತ್ರಾಣರಾಗಿದ್ದ ಅವರು ಆ ಸಮಯದಲ್ಲಿ ಅಲ್ಲೇ ಇದ್ದ ತೇಲುತ್ತಾ ಇದ್ದ ವಸ್ತುವನ್ನ ಆಧಾರವಾಗಿ ಇಟ್ಟುಕೊಂಡಿದ್ದು, ಕೊನೆಗೆ ಅಲ್ಲೇ ಬಂದ ಪುಟ್ಟ ದೋಣಿಯ ಸಹಾಯದಿಂದ ದಡಕ್ಕೆ ಸೇರಿದ್ದನು.
ಅಂತೂ ಇಂತೂ ಪುನಃ ಬದುಕಿ ದಡಕ್ಕೆ ಬರಲು ಸಾಧ್ಯವಾಗಿದ್ದೇ ಪವಾಡ ಅನ್ನುವ ಹಾಗಾಗಿತ್ತು. ಈ ಭಾವುಕ ಕ್ಷಣಗಳ ವಿಡಿಯೋವನ್ನ ಅವರು ತಮ್ಮ ಸೊಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡಿದ್ದಾರೆ.
ಈ ಘಟನೆಯು ಹಾಲಿವುಡ್ ಸಿನೆಮಾ ‘ಕಾಸ್ಟ್ ಅವೇ’ ಸಿನೆಮಾ ನೆನಪಿಸಿತ್ತು. ನಾನು ನೀರ ಮಧ್ಯೆ ಸಿಕ್ಕಾಕಿಕೊಂಡು ಪರದಾಡುತ್ತಿದ್ದಾಗ ನನಗೆ ಏನು ಮಾಡಬೇಕು ಅನ್ನೋದೇ ಗೊತ್ತಾಗಿರ್ಲಿಲ್ಲ. ನಾನು ಇದ್ದ ಪ್ರದೇಶದಲ್ಲಿ ದೊಡ್ಡ ದೊಡ್ಡ ಮೀನುಗಳು ಹಾಗೂ ಶಾರ್ಕ್ ಮೀನಿನ ಆವಾಸಸ್ಥಾನವಾಗಿತ್ತು. ನಾನು ಅವುಗಳ ಜೊತೆ ಹೋರಾಡಲು ಮಾನಸಿಕವಾಗಿ ಸಿದ್ಧನಾಗಿದ್ದೆ. ಅದೃಷ್ಟವಶಾತ್ ಅಂತಹದ್ದೇನು ಅಲ್ಲಿ ಆಗಲಿಲ್ಲ. ಎಂದು ನೀರಲ್ಲಿ ಬಿದ್ದ ಈ ವ್ಯಕ್ತಿ ತನಗಾದ ಅನುಭವನ್ನ ಹೇಳಿದ್ದಾರೆ.