ಹಣ ವಿತ್ ಡ್ರಾ ಮಾಡುವುದು ಇನ್ಮುಂದೆ ಮತ್ತಷ್ಟು ದುಬಾರಿಯಾಗಲಿದೆ. ನಿಗದಿತ ಮಿತಿಗಿಂತ ಹೆಚ್ಚು ವಿತ್ ಡ್ರಾಗೆ ಬ್ಯಾಂಕ್ ಶುಲ್ಕ ವಿಧಿಸಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ಮೇಲಿನ ಶುಲ್ಕವನ್ನು 21 ರೂಪಾಯಿಗೆ ಹೆಚ್ಚಿಸಲು ಬ್ಯಾಂಕ್ ಅನುಮತಿ ನೀಡಿದೆ. ಈ ಪರಿಷ್ಕೃತ ದರಗಳು ಜನವರಿ 1, 2022 ರಿಂದ ಜಾರಿಗೆ ಬರಲಿವೆ.
ಗ್ರಾಹಕರು ತಮ್ಮ ಬ್ಯಾಂಕಿನ ಎಟಿಎಂಗಳಿಂದ ಪ್ರತಿ ತಿಂಗಳು, ಐದು ಉಚಿತ ವಹಿವಾಟುಗಳನ್ನು ಮಾಡಬಹುದು. ಇದನ್ನು ಮೀರಿದ ನಂತ್ರ, ಪ್ರತಿ ಎಟಿಎಂ ವಹಿವಾಟಿಗೆ ಹೆಚ್ಚುವರಿ 20 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಹಣ ವಿತ್ ಡ್ರಾ ಮಾಡಲು ಇತರ ಬ್ಯಾಂಕುಗಳ ಎಟಿಎಂ ಬಳಸುವ ಗ್ರಾಹಕರಿಗೆ, ಮೆಟ್ರೊ ನಗರಗಳಲ್ಲಿ ಮೂರು ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಐದು ಉಚಿತ ಎಟಿಎಂ ವಹಿವಾಟಿಗೆ ಅವಕಾಶ ನೀಡಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜುಲೈ ಆರಂಭದಲ್ಲಿ ಎಟಿಎಂ ಮತ್ತು ಬ್ಯಾಂಕ್ ಶಾಖೆಗಳಿಂದ ಹಣ ವಿತ್ ಡ್ರಾ ಶುಲ್ಕವನ್ನು ಪರಿಷ್ಕರಿಸಿದೆ. ಎಸ್‌ಬಿಐ, ಬಿಎಸ್‌ಬಿಡಿ ಖಾತೆದಾರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.