ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದ್ದು, ಅಕ್ರಮಗಳ ತಡೆಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದುವರೆಗೆ 75.47 ಕೋಟಿ ರೂ. ನಗದು ಸೇರಿ 403.40 ಕೋಟಿ ರೂ. ಮೌಲ್ಯದ ವಸ್ತು ಪಡೆಯಲಾಗಿದೆ.
ಚುನಾವಣೆ ಅಕ್ರಮ ತಡೆಯುವ ನಿಟ್ಟಿನಲ್ಲಿ ರಚಿಸಲಾದ ಕ್ಷಿಪ್ರಪಡೆ, ಕಣ್ಗಾವಲು ತಂಡ, ಪೊಲೀಸ್, ಅಬಕಾರಿ, ಆದಾಯ, ವಾಣಿಜ್ಯ ಇಲಾಖೆಗಳು ಕಾರ್ಯಾಚರಣೆ ನಡೆಸಿವೆ. 177 ಕೋಟಿ ರೂಪಾಯಿ ಮೌಲ್ಯದ ಮದ್ಯ, 11.23 ಕೋಟಿ ಮೌಲ್ಯದ ಡ್ರಗ್ಸ್, 1.18 ಕೋಟಿ ಮೌಲ್ಯದ ಬೆಳ್ಳಿ, 57 ಕೋಟಿ ರೂ. ಮೌಲ್ಯದ ಚಿನ್ನ, 8.14 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ, 72 ಕೋಟಿ ಮೌಲ್ಯದ ಇತರೆ ಬೆಲೆ ಬಾಳುವ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು, ಇದುವರೆಗೆ 1975 ಎಫ್ಐಆರ್ ದಾಖಲಿಸಲಾಗಿದೆ.