ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಚುನಾವಣೆಯ ಅಕ್ರಮಗಳು ಹೆಚ್ಚಾಗತೊಡಗಿದ್ದು, ವಿವಿಧ ಇಲಾಖೆಗಳ ತನಿಖಾ ತಂಡಗಳು ಕಾರ್ಯಾಚರಣೆ ನಡೆಸಿ 6.88 ಕೋಟಿ ರೂಪಾಯಿ ನಗದು ಸೇರಿದಂತೆ 31.18 ಕೋಟಿ ರೂಪಾಯಿ ಮೌಲ್ಯದ ದಾಖಲೆ ಇಲ್ಲದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
22.28 ಕೋಟಿ ರೂಪಾಯಿ ಮೌಲ್ಯದ ಮದ್ಯ, 52.42 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳು, 4.50 ಲಕ್ಷ ರೂಪಾಯಿ ಮೌಲ್ಯದ ಚಿನ್ನ, 25.97 ಲಕ್ಷದ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ನಗದು, ಮದ್ಯ, ಮಾದಕ ವಸ್ತು, ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಎಫ್ಐಆರ್ ದಾಖಲಿಸಲಾಗಿದೆ. 56,515 ಶಸ್ತ್ರಾಸ್ತ್ರ ಠೇವಣಿ ಮಾಡಲಾಗಿದೆ. 828 ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. 3435 ಪ್ರಕರಣ ದಾಖಲಿಸಲಾಗಿದೆ.