ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ನಿಂದ ಗ್ಯಾರಂಟಿ ಯೋಜನೆ ಘೋಷಿಸಲಾಗುವುದು.
ಮಹಿಳಾ ಮತದಾರರನ್ನು ಸೆಳೆಯಲು ಅರ್ಹ ಮಹಿಳೆಯರಿಗೆ ಮದುವೆಯ ಸಮಯದಲ್ಲಿ 10 ಗ್ರಾಂ ಚಿನ್ನ, ಒಂದು ಲಕ್ಷ ರೂಪಾಯಿ ನಗದು ನೀಡುವುದಾಗಿ ಘೋಷಿಸಲಾಗಿದೆ. ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ಸಹಿತ ಹಲವು ಹೊಸ ಕೊಡುಗೆಗಳನ್ನು ನೀಡುವುದಾಗಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಡಿ. ಶ್ರೀಧರ್ ಬಾಬು ಹೇಳಿದ್ದಾರೆ.
ನವೆಂಬರ್ 30ರಂದು ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ನಿಂದ ಹಲವು ಭರವಸೆ ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಮದುವೆಯ ಸಮಯದಲ್ಲಿ ಅರ್ಹ ಮಹಿಳೆಯರಿಗೆ 10 ಗ್ರಾಂ ಚಿನ್ನ, ಒಂದು ಲಕ್ಷ ರೂಪಾಯಿ ನಗದು ನೀಡಲಾಗುವುದು ಎಂದು ಶ್ರೀಧರ್ ತಿಳಿಸಿದ್ದಾರೆ.