alex Certify ರಾಜ್ಯ ರಾಜಧಾನಿಯ ಮನೆಗಳ್ಳತನ ಪ್ರಕರಣಗಳಲ್ಲಿ ಶೇ.33 ರಷ್ಟು ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ರಾಜಧಾನಿಯ ಮನೆಗಳ್ಳತನ ಪ್ರಕರಣಗಳಲ್ಲಿ ಶೇ.33 ರಷ್ಟು ಹೆಚ್ಚಳ

ಕಳೆದ ಡಿಸೆಂಬರ್ ನ ಮೊದಲ ವಾರದಲ್ಲಿ ಮನೆಕೆಲಸದಾಕೆ ಐಪಿಎಸ್ ಅಧಿಕಾರಿಯ ಮನೆಯಿಂದಲೇ ಚಿನ್ನದ ಒಡವೆ ಹಾಗೂ ದುಡ್ಡು ಕದ್ದಿದ್ದಳು. 32ಸಾವಿರ ದುಡ್ಡು, ಮೂರು ಚಿನ್ನದ ಓಲೆಗಳನ್ನ ಕದ್ದ ಆಕೆಯನ್ನ ಪೊಲೀಸರು ಕಂಡುಹಿಡಿದಿದ್ದರು. ಆಕೆ ಬಳಿಯಿಂದ ಕದ್ದ ಒಡವೆ ಹಾಗೂ ಹಣವನ್ನ ರಿಕವರ್ ಮಾಡಲಾಗಿತ್ತು. ಇದು 2021ರಲ್ಲಿ ಬೆಂಗಳೂರಿನಲ್ಲಿ ದಾಖಲಾದ 179 ಕಳ್ಳತನ ಪ್ರಕರಣಗಳಲ್ಲಿ ಒಂದು. ಈ 179 ಪ್ರಕರಣಗಳಲ್ಲಿ ಮನೆಕೆಲಸವರೇ ಕಳ್ಳರು ಎಂಬುದು ಗಮನಾರ್ಹ.

2020ಕ್ಕೆ ಹೋಲಿಸಿದರೆ 2021ರಲ್ಲಿ ನಗರದಲ್ಲಿ ಮನೆಕೆಲಸದವರಿಂದಲೇ ಕಳ್ಳತನ ಮಾಡುವ ಪ್ರಕರಣಗಳು 33% ಏರಿಕೆಯಾಗಿವೆ‌. 179 ಪ್ರಕರಣಗಳಲ್ಲಿ, 95 ಪ್ರಕರಣಗಳನ್ನ ಬಗೆಹರಿಸಲಾಗಿದ್ದು, ಸಾಕಷ್ಟು ಕೇಸ್ ಗಳಲ್ಲಿ ಕದ್ದ ಸಂಪೂರ್ಣ ವಸ್ತುಗಳನ್ನ ರಿಕವರ್ ಮಾಡಲಾಗಿದೆ. 2020ರಲ್ಲಿ ಈ ತರಹದ ಒಟ್ಟು 134 ಪ್ರಕರಣಗಳು ದಾಖಲಾಗಿದ್ದವು, ಅದರಲ್ಲಿ 64 ಪ್ರಕರಣಗಳನ್ನ ಪೊಲೀಸರು ಬೇಧಿಸಿದ್ದರು.

ಲಾಕ್ ಡೌನ್ ನಿಂದ ಸಾಕಷ್ಟು ಮನೆಕೆಲಸದವರು ಕೆಲಸಗಳನ್ನ ಕಳೆದುಕೊಂಡರು. ಕೊರೋನಾ ಭಯದಿಂದ ಸಾಕಷ್ಟು ಜನರನ್ನ ಕೆಲಸಗಳಿಂದ ಕೈ ಬಿಡಲಾಯಿತು. ಕೆಲಸವಿಲ್ಲದೆ, ಹಣವಿಲ್ಲದೆ ಮನೆಕೆಲಸ ಮಾಡಿಕೊಂಡಿದ್ದವರು, ಹೀಗೆ ಕಳ್ಳತನಗಳಿಗೆ ಇಳಿದಿರಬಹುದು.

2021ರಲ್ಲಂತೂ ಮನೆಕೆಲಸದವರನ್ನ ಕೆಲಸದಿಂದ ಕೈಬಿಡುವ ಸಂಖ್ಯೆ ಹೆಚ್ಚಿತು, ಅದರ ಜೊತೆ ಮನೆಗಳಲ್ಲಿ ಕಳ್ಳತನವು ಹೆಚ್ಚಿತು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

ನಮ್ಮ ಡಿಪಾರ್ಟ್ಮೆಂಟ್ ಸಾಕಷ್ಟು ಕಳ್ಳರನ್ನ ಹಿಡಿದು ಪ್ರಕರಣಗಳನ್ನ ಬೇಧಿಸಿದೆ. ಕಳ್ಳತನ ಮಾಡಿ ಬೆಂಗಳೂರು ಅಥವಾ ಸುತ್ತಾ ಮುತ್ತಾ ಇದ್ದವರನ್ನ ಹಿಡಿಯುವುದು ಸುಲಭ, ಆದರೆ ದೂರದ ಜಿಲ್ಲೆಗಳು ಹಾಗೂ ಇತರ ರಾಜ್ಯಗಳಿಗೆ ಹೋಗುವವರನ್ನ ಹಿಡಿಯುವುದು ಕಷ್ಟ. ಏಕೆಂದರೆ ಲಾಕ್ ಡೌನ್ ನಲ್ಲಿ ಬೇರೆ ರಾಜ್ಯಗಳಿಗೆ ಪ್ರಯಾಣಿಸುವುದು ಕಷ್ಟ ಎಂದು ಪಂತ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...