ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳ ಜೊತೆ ಬಾಂಬ್ ಕೂಡ ಉಚಿತವಾಗಿ ಸಿಗುತ್ತದೆ ಎಂದು ಸೆಲ್ಫಿ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಉಡುಪಿ ಜಿಲ್ಲೆ ಮಲ್ಪೆಯ ಕರಡಿಮಜಲು ನಿವಾಸಿ ದಿವಾಕರ ಕೋಟ್ಯಾನ್ ಎಂಬುವರ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಘಟನೆ ಹಿನ್ನೆಲೆಯಲ್ಲಿ ದಿವಾಕರ್ ಸೆಲ್ಫಿ ವಿಡಿಯೋ ಮಾಡಿದ್ದರು. ಮಹಿಳೆಯರಿಗೆ ಪ್ರಯಾಣಕ್ಕೆ ಉಚಿತ ಬಸ್ ಟಿಕೆಟ್, 2000 ರೂ., ವಿದ್ಯುತ್ ಬಿಲ್ ಫ್ರೀ ಜೊತೆಗೆ ಈಗ ಹೊಸದಾಗಿ ಬಾಂಬ್ ಸ್ಪೋಟ ಉಚಿತವಾಗಿ ರಾಜ್ಯ ಸರ್ಕಾರ ಕೊಡುತ್ತಿದೆ. ಇದಕ್ಕೆ ಹಣ ಕೊಡಬೇಕಿಲ್ಲ, ಎಲ್ಲಾ ಫ್ರೀ ಎಂದು ಲೇವಡಿ ಮಾಡಿ ವಿಡಿಯೋ ಹರಿಬಿಟ್ಟಿದ್ದರು.