![](https://kannadadunia.com/wp-content/uploads/2017/11/cm-si.jpg)
ರಾಮನಗರ : ಸಿಎಂ ಸಿದ್ದರಾಮಯ್ಯ ಅವರ ಫೋಟೋ ವಿರೂಪಗೊಳಿಸಿದ ಆರೋಪದಲ್ಲಿ ಮಾಜಿ ಎಂಎಲ್ ಸಿ ಅಶ್ವತ್ಥ್ ನಾರಾಯಣ ಗೌಡ ಸೇರಿದಂತೆ ಎಂಟು ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಾಹನ ಅಡ್ಡಗಟ್ಟಿ ಸಿಎಂ ಸಿದ್ದರಾಮಯ್ಯ ಹಾಗೂ ಪಶು ಸಂಗೋಪನಾ ಸಚಿವರ ಭಾವಚಿತ್ರ ವಿರೂಪಗೊಳಿಸಿದ ಎಂಟು ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಎಂಎಲ್ ಸಿ ಅಶ್ವತ್ಥ್ ನಾರಾಯಣ ಗೌಡ, ಹಲುವಾಡಿ ದೇವರಾಜ್, ಚನ್ನಪ್ಪ ವಿನೋದ್, ಶಿವಾನಂದ, ಪುಷ್ಪಲತಾ ಆರಾಧ್ಯ, ನಾಗೇಶ್, ಕಿಸಾನ್, ವರುಣ್ ವಿರುದ್ಧ ದೂರು ದಾಖಲಾಗಿದೆ.