ಬೆಂಗಳೂರು : ಬೆಂಗಳೂರಿನ ಶೇಷಾದ್ರಿಪುರಂ ಜೆಡಿಎಸ್ ಕಚೇರಿ ಮೇಲೆ ವಿದ್ಯುತ್ ಕಳ್ಳ ಹೆಚ್.ಡಿ. ಕುಮಾರಸ್ವಾಮಿ ಎನ್ನುವ ಪೋಸ್ಟರ್ ಗಳನ್ನು ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜೆಡಿಎಸ್ ನ ಬೆಂಗಳೂರು ನಗರಾಧ್ಯಕ್ಷ ಎಚ್‌ಎಂ ರಮೇಶ್ ಗೌಡ ಅವರ ದೂರಿನ ಮೇರೆಗೆ ಪೊಲೀಸರು ಆರು ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಆಟೊ ರಿಕ್ಷಾದಲ್ಲಿ ಬಂದ ನಾಲ್ವರು ನೇರವಾಗಿ ಜೆಡಿಎಸ್ ಕಚೇರಿಯ ಗೋಡೆಗೆ ಪೋಸ್ಟರ್ ಅಂಟಿಸಿದ್ದಾರೆ. ಜೆಡಿ(ಎಸ್) ನಾಯಕರನ್ನು ಗುರಿಯಾಗಿಸಿಕೊಂಡು ಗುಂಪು ನಿಂದನೀಯ ಘೋಷಣೆಗಳನ್ನು ಕೂಗಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜೆ.ಪಿ. ನಗರದಲ್ಲಿರುವ ಕುಮಾರಸ್ವಾಮಿ ನಿವಾಸಕ್ಕೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿದ್ಯುತ್ ದೀಪಲಂಕಾರ ಮಾಡಲಾಗಿದ್ದು, ಇದಕ್ಕಾಗಿ ಪಕ್ಕದ ವಿದ್ಯುತ್ ಕಂಬದಿಂದ ಸಂಪರ್ಕ ಪಡೆಯಲಾಗಿತ್ತು.