ಬೆಂಗಳೂರು : ಬೆಂಗಳೂರಿನ ಕಾಡುಗೋಡಿಯಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ 9 ತಿಂಗಳ ಮಗು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಲೋಕಾಯುಕ್ತಕ್ಕೆ ವರದಿ ಸಲ್ಲಿಕೆಯಾಗಲಿದೆ.
ಘಟನೆ ಸಂಬಂಧ ಲೋಕಾಯುಕ್ತದಲ್ಲಿ ಸುಮೊಟೊ ಕೇಸ್ ದಾಖಲಾಗಿದ್ದು, ಇಂದು ವರದಿ ಸಲ್ಲಿಸಲಿದ್ದಾರೆ. ವೈಟ್ ಫೀಲ್ಡ್ ನ ಕಾಡುಗೋಡಿಯಲ್ಲಿ ವಿದ್ಯುತ್ ತಂತಿ ತುಳಿದು ತಾಯಿ ಹಾಗೂ 9 ತಿಂಗಳ ಮಗು ಸಜೀವ ದಹನಗೊಂಡಿದ್ದರು. ಪ್ರಕರಣ ಸಂಬಂಧ ಐವರು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿ, ಬಂಧಿಸಿ ನಂತರ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.
ಹಳೆಯ ಮತ್ತು ಶಿಥಿಲಗೊಂಡ ವಿದ್ಯುತ್ ಮಾರ್ಗಗಳನ್ನು ಗಮನಿಸಿ ಸುಸ್ಥಿಯಲ್ಲಿಟ್ಟುಕೊಂಡಿಲ್ಲ. ಎಲ್ಬಿಎಸ್ನ ನಿರ್ವಹಣೆ ಮಾಡಿ ವರ್ಮಿನ್ ಪ್ರೂಪ್ ಆಗಿ ನಿರ್ವಹಿಸಿದ್ರೆ ಅವಘಡ ನಡೆಯುತ್ತಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ತಾಯಿ ಹಾಗೂ 9 ತಿಂಗಳ ಮಗು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಸಜೀವ ದಹನವಾಗಿದ್ದರು. ಘಟನೆಯಲ್ಲಿ ಮಹಿಳೆಯ ಪತಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು.