ಬೆಂಗಳೂರು: ಇನ್ಮುಂದೆ ದೇವಸ್ಥಾನಗಳಲ್ಲಿ ಮಹಾ ಮಂಗಳಾರತಿ, ವಿಶೇಷ ಪೂಜೆ ವೇಳೆ ಜೋರಾಗಿ ಘಂಟೆ ಶಬ್ಧಕ್ಕೂ ಕಡಿವಾಣ ಹಾಕಲಾಗುತ್ತಿದೆ.
ಬೆಂಗಳೂರಿನ ದೊಡ್ಡಗಣಪತಿ ಹಾಗೂ ಸುತ್ತಮುತ್ತಲಿನ ಸಮೂಹ ದೇವಾಲಯಗಳಲ್ಲಿ ಡೆಸಿಬಲ್ ಶಬ್ಧಕ್ಕಿಂತ ಹೆಚ್ಚಿನ ಶಬ್ಧವನ್ನು ಉಪಯೋಗಿಸಿದರೆ ಕೇಸ್ ದಾಖಲಿಸಲಾಗುವುದು ಎಂದು ಬಸವನಗುಡಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನೋಟಿಸ್ ನೀಡಿದ್ದಾರೆ.
‘ಪ್ರೇಮಿಗಳ ದಿನ’ ದಂದು ಪತಿಗೆ ಮರೆಯಲಾಗದ ಉಡುಗೊರೆ ನೀಡಿದ ಪತ್ನಿ…..!
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಶಬ್ಧ ಮಾಲಿನ್ಯ ಹಾಗೂ ಪರಿಸರ ಸಂರಕ್ಷಣೆ ಕಾಯ್ದೆ 1986ರ ಅಡಿಯಲ್ಲಿ ಡೆಸಿಬಲ್ ಶಬ್ಧಕ್ಕಿಂತ ಹೆಚ್ಚಿನ ಶಬ್ಧ ಉಪಯೋಗಿಸಿದರೆ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಸವನಗುಡಿ ದೊಡ್ಡಗಣಪತಿ ಹಾಗೂ ಸಮೂಹ ದೇವಾಲಯಗಳಲ್ಲಿ ಮಹಾಮಂಗಳಾರತಿ, ಅಭಿಷೇಕ ಇತ್ಯಾದಿ ಸಂದರ್ಭಗಳಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಉಪಯೋಗಿಸುವಂತಹ ಢಮರುಗ, ಧ್ವನಿವರ್ಧಕ ಯಂತ್ರಗಳಿಂದ ಹೆಚ್ಚಿನ ಶಬ್ಧ ಉಪಯೋಗಿಸುವಂತಿಲ್ಲ ಎಂದು ಸೂಚಿಸಲಾಗಿದೆ.