alex Certify ಸೇವಾ ನ್ಯೂನ್ಯತೆ: ಪರಿಹಾರ ಮೊತ್ತ ಪಾವತಿಸಲು ಇನ್ಶೂರೆನ್ಸ್ ಕಂಪೆನಿಗೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇವಾ ನ್ಯೂನ್ಯತೆ: ಪರಿಹಾರ ಮೊತ್ತ ಪಾವತಿಸಲು ಇನ್ಶೂರೆನ್ಸ್ ಕಂಪೆನಿಗೆ ಆದೇಶ

ಶಿವಮೊಗ್ಗ: ಸೇವಾ ನ್ಯೂನ್ಯತೆ ಪ್ರಕರಣದಲ್ಲಿ ಅರ್ಜಿದಾರರಿಗೆ ಪರಿಹಾರ ಮೊತ್ತ ಪಾವತಿಸಲು ಇನ್ಶೂರೆನ್ಸ್ ಕಂಪೆನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಅರ್ಜಿದಾರರಾದ ಸಿ.ಡಿ. ರವಿರಾಜ್ ಹೆಚ್‍ಡಿಎಫ್‍ಸಿ-ಇಆರ್‍ಜಿಓ ಜನರಲ್ ಇನ್ಶೂರೆನ್ಸ್ ಕಂ.ಲಿ ಮುಂಬೈ ಮತ್ತು ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರರಿಗೆ ವಿಮಾ ಮೊತ್ತ ನೀಡುವಂತೆ ಆಯೋಗದ ಪೀಠ ಆದೇಶಿಸಿದೆ.

ಅರ್ಜಿದಾರರು ಬಿಎಎಂಎಸ್ ವೈದ್ಯರಾಗಿದ್ದು ಹೆಚ್‍ಡಿಎಫ್‍ಸಿ-ಇಆರ್‍ಜಿಓ ಜನರಲ್ ಇನ್ಶೂರೆನ್ಸ್ ಕಂ.ಲಿ ಇವರಿಂದ 6,00,000 ರೂ.ಪರಿಹಾರ ಮೊತ್ತ ಒಳಗೊಂಡ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು 2021 ರಲ್ಲಿ ಪಡೆದಿರುತ್ತಾರೆ.

ಅರ್ಜಿದಾರರು ದಿ: 02-08-2021 ರಂದು ಕೋವಿಡ್-19 ಗೆ ಒಳಗಾಗಿ ಹಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಚಿಕಿತ್ಸೆ ಒಟ್ಟು ಖರ್ಚು 4,08,564 ರೂ. ಗಳಾಗಿದ್ದು, ಚಿಕಿತ್ಸೆ ನಂತರ ಅರ್ಜಿದಾರರು ವಿಮಾ ಕಂಪೆನಿಯವರಲ್ಲಿ ವೈದ್ಯಕೀಯ ವೆಚ್ಚದ ಮರುಪಾವತಿ ಅರ್ಜಿ ಸಲ್ಲಿಸಿದಾಗ ಎದುರುದಾರರು ನಕಲಿ ದಾಖಲೆ ಸೃಷ್ಟಿಸಿ ತಪ್ಪಾಗಿ ನಿರೂಪಿಸದ್ದಾರೆಂದು ತಿಳಿಸಿ, ವಿಮಾ ಪರಿಹಾರ ನೀಡಲು ನಿರಾಕರಿಸಿದ್ದಲ್ಲದೆ, ವಿಮಾ ಪಾಲಿಸಿಯನ್ನು ಕೂಡ ರದ್ದು ಪಡಿಸಿರುತ್ತಾರೆ.

ಗ್ರಾಹಕರ ಆಯೋಗವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಪಕ್ಷಗಾರರು ಹಾಜರುಪಡಿಸಿದ ಎಲ್ಲ ದಾಖಲೆಗಳನ್ನು, ಚಿಕಿತ್ಸೆ ಪಡೆದಂತಹ ವೈದ್ಯಕೀಯ ದಾಖಲೆಗಳನ್ನು ಅವಲಂಬಿಸಿ, ಎದುರುದಾರ ವಿಮಾ ಕಂಪೆನಿ ನಿರಾಕರಣೆಯು ಸೇವಾನ್ಯೂನ್ಯತೆಯಿಂದ ಕೂಡಿರುತ್ತದೆ ಎಂದು ತೀರ್ಮಾನಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸುತ್ತದೆ.

ವಿಮಾ ಕಂಪೆನಿಯು ಈ ಆದೇಶವಾದ 45 ದಿನಗಳೊಳಗಾಗಿ ಅರ್ಜಿದಾರರು ಪಡೆದಿದ್ದ ಪಾಲಿಸಿಯನ್ನು ಪುನರುಜ್ಜೀವಗೊಳಿಸಬೇಕು ಹಾಗೂ ವಿಮಾ ಪರಿಹಾರ ಮೊತ್ತ 4,08,165 ರೂ.ಗಳನ್ನು ವಾರ್ಷಿಕ ಬಡ್ಡಿ ಶೇ.9 ಸಮೇತ ಪಾವತಿಸತಕ್ಕದ್ದು, ಮಾನಸಿಕ ಹಾನಿಗೆ ಪರಿಹಾರವಾಗಿ 25,000 ರೂ., ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು 10,000 ರೂ. ಪಾವತಿಸಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟೆ, ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...