ಮುಂಬೈ: ಸಾಲ ಕೊಡಲು ನಿರಾಕರಿಸಿದ ಬ್ಯಾಂಕ್ ಗೆ ಬಾಂಬ್ ಇಟ್ಟು ಉಡಾಯಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ ಘಟನೆ ಮುಂಬೈನಲ್ಲಿ ನಡೆದಿದೆ.
ಮೊಹಮ್ಮದ್ ಜಿಯಾ ಅಲಿ ಎಂದು ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿ 10 ಲಕ್ಷ ರೂಪಾಯಿ ಕೊಡುವಂತೆ ದಕ್ಷಿಣ ಮುಂಬೈ ಎಸ್ಬಿಐ ಬ್ಯಾಂಕ್ ಗೆ ಕೇಳಿದ್ದಾನೆ. ಸಾಲ ಕೊಡಲು ಬ್ಯಾಂಕ್ ನಿರಾಕರಿಸಿದ್ದು, ಇದರಿಂದ ಆಕ್ರೋಶಗೊಂಡ ಜಿಯಾ ಅಲಿ ಎಸ್.ಬಿ.ಐ. ಪ್ರಧಾನ ಕಚೇರಿಗೆ ಬಾಂಬ್ ಇಟ್ಟು ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಬ್ಯಾಂಕ್ ಮುಖ್ಯಸ್ಥರ ಅಪಹರಿಸಿ ಹತ್ಯೆ ಮಾಡುವುದಾಗಿ ಹೆದರಿಸಿದ್ದಾನೆ.
ಅಕ್ಟೋಬರ್ 13 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆ ಬಂದ ನಂತರ ಪ್ರಕರಣ ದಾಖಲಿಸಲಾಗಿದೆ. ಕರೆ ಮಾಡಿದವರು ಪಾಕಿಸ್ತಾನದಿಂದ ಮಾತನಾಡುವುದಾಗಿ ಹೇಳಿಕೊಂಡು ಸಾಲಕ್ಕೆ ಒತ್ತಾಯಿಸಿದರು. ಸಾಲ ನೀಡದಿದ್ದರೆ ಬ್ಯಾಂಕ್ ಅಧ್ಯಕ್ಷರನ್ನು ಅಪಹರಿಸಿ ಕೊಂದು ಬ್ಯಾಂಕ್ ಸ್ಫೋಟಿಸುವುದಾಗಿ ಹೇಳಿಕೆ ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡ ಮುಂಬೈ ಪೊಲೀಸರು ತಿಳಿಸಿದ್ದಾರೆ.