alex Certify ರಾಜ್ಯದಲ್ಲಿಂದು ಸಾವಿರದೊಳಗೆ ಹೊಸ ಕೇಸ್, ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿಂದು ಸಾವಿರದೊಳಗೆ ಹೊಸ ಕೇಸ್, ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 973 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,56,137 ಕ್ಕೆ ಏರಿಕೆಯಾಗಿದೆ.

ಇಂದು 17 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 37,426 ಜನ ಸಾವನ್ನಪ್ಪಿದ್ದಾರೆ. ಇವತ್ತು 1071 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,01,299 ಜನ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ 17,386 ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿಂದು 1,39,090 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.69 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 243 ಜನರಿಗೆ ಸೋಂಕು ತಗುಲಿದೆ. 260 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 8 ಜನ ಸಾವನ್ನಪ್ಪಿದ್ದಾರೆ. 7180 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಸೋಂಕಿತರ ಮಾಹಿತಿ:

ಬಾಗಲಕೋಟೆ 0, ಬಳ್ಳಾರಿ 6, ಬೀದರ್ 1, ಚಾಮರಾಜನಗರ 3, ಚಿಕ್ಕಬಳ್ಳಾಪುರ 4, ದಾವಣಗೆರೆ 7, ಧಾರವಾಡ 6, ಗದಗ 0, ಹಾವೇರಿ 0, ಕಲ್ಬುರ್ಗಿ 8, ಕೊಪ್ಪಳ 1, ರಾಯಚೂರು 1, ರಾಮನಗರ 1, ವಿಜಯಪುರ 1, ಯಾದಗಿರಿ 0, ಬೆಂಗಳೂರು ನಗರ 243, ದಕ್ಷಿಣಕನ್ನಡ 258, ಹಾಸನ 62, ಕೊಡಗು 52, ಮೈಸೂರು 78, ಉಡುಪಿ 53 ಹೊಸ ಪ್ರಕರಣ ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ:

ಬಾಗಲಕೋಟೆ 1, ಬೆಂಗಳೂರು ನಗರ 8, ದಕ್ಷಿಣಕನ್ನಡ 2, ಹಾಸನ 1, ಹಾವೇರಿ 2, ತುಮಕೂರು, ಉಡುಪಿ, ಉತ್ತರಕನ್ನಡ ಜಿಲ್ಲೆಯಲ್ಲಿ ತಲಾ 1 ಸೇರಿ ರಾಜ್ಯದಲ್ಲಿ 17 ಜನ ಸೋಂಕಿತರ ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...