ಏಲಕ್ಕಿ ಕೇವಲ ಆಹಾರದಲ್ಲಿ ಮಾತ್ರ ಉತ್ತಮ ರುಚಿಯನ್ನು ನೀಡುವುದಿಲ್ಲ. ಆರೋಗ್ಯದ ವಿಚಾರದಲ್ಲೂ ಏಲಕ್ಕಿ ಬಹುಮುಖ್ಯ ಪಾತ್ರವಹಿಸುತ್ತದೆ. ಅದರಲ್ಲೂ ಖಿನ್ನತೆ, ಒತ್ತಡದಂತಹ ಸಮಸ್ಯೆಗೆ ಏಲಕ್ಕಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಾನಸಿಕ ಸಮಸ್ಯೆಗಳನ್ನು ಹಂತ ಹಂತವಾಗಿ ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿ ನೀಡುವ ಶಕ್ತಿ ಏಲಕ್ಕಿಗಿದೆ.
ಹಾಗಾದ್ರೆ ಏಲಕ್ಕಿಯಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ ಬನ್ನಿ.
ರಕ್ತದೊತ್ತಡ ಕಡಿಮೆ ಮಾಡುತ್ತೆ : ನಾರಿನಂಶ ಹೇರಳವಾಗಿರುವ ಏಲಕ್ಕಿ ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ. ಇದರಿಂದ ರಕ್ತದೊತ್ತಡದ ಸಮಸ್ಯೆಗೆ ಪ್ರಯೋಜನಕಾರಿ.
ರೋಗನಿರೋಧಕ ಶಕ್ತಿ : ಫ್ರೀ ರ್ಯಾಡಿಕಲ್ ಸೆಲ್ಸ್ನಿಂದ ದೇಹವನ್ನು ರಕ್ಷಿಸುತ್ತದೆ. ಹೇರಳ ವಿಟಮಿನ್ಸ್ , ಎಸೆನ್ಷಿಯಲ್ ಆಯಿಲ್ಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ.
ಜೀರ್ಣಕ್ರಿಯೆ ಸರಾಗ : ನಮ್ಮ ಮನಸ್ಥಿತಿ ನಮ್ಮ ಜೀರ್ಣಕ್ರಿಯೆಯನ್ನೂ ಅವಲಂಭಿಸಿರುತ್ತದೆ. ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾದಗ ನಮ್ಮ ಆಲೋಚನೆಗಳಲ್ಲೂ ವ್ಯತ್ಯಯವಾಗುತ್ತದೆ. ಈ ನಿಟ್ಟಿನಲ್ಲಿ ಏಲಕ್ಕಿ ಜೀರ್ಣಕ್ರಿಯೆಗೆ ಅಗತ್ಯವಾದ ರಸವನ್ನು ಪೂರೈಸುತ್ತದೆ. ಗ್ಯಾಸ್, ಮಲಬದ್ದತೆಯಂಥ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
ಖಿನ್ನತೆ ಮತ್ತು ಆತಂಕ ನಿವಾರಕ : ನಿಮಗೆ ಅತಿಯಾದ ಒತ್ತಡ, ಖಿನ್ನತೆ , ಆತಂಕ ಕಾಣಿಸಿಕೊಂಡಾಗ ಒಂದು ಕಪ್ ಏಲಕ್ಕಿ ಚಹಾ ಸೇವಿಸಿ. ಇದು ಕೊರ್ಟಿಸೋಲ್ ಹಾರ್ಮೋನ್ ಹೆಚ್ಚಿಸುತ್ತದೆ. ಅಲ್ಲದೇ ತಾಜಾತನವನ್ನು ನೀಡುತ್ತದೆ.
ಲೈಂಗಿಕ ಸಮಸ್ಯೆ ನಿವಾರಣೆ : ನಪುಂಸಕತೆ ಮತ್ತು ಅವಧಿಪೂರ್ವ ಸ್ಖಲನವನ್ನು ನಿಯಂತ್ರಿಸಲು ಏಲಕ್ಕಿ ಸೇವನೆ ಪರಿಣಾಮಕಾರಿ. ಹಾಲು, ಜೇನು ಮತ್ತು ಏಲಕ್ಕಿ ಹಾಕಿದ ಹಾಲಿನ ಸೇವನೆಯಿಂದ ಲೈಂಗಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.