ಏಲಕ್ಕಿ ಸಿಹಿತಿನಿಸುಗಳ ರುಚಿ ಹೆಚ್ಚಿಸುತ್ತದೆ. ಅಷ್ಟೆ ಅಲ್ಲ, ಆರೋಗ್ಯದಾಯಕವೂ ಹೌದು. ಇದರ ವಿಶಿಷ್ಟ ಪರಿಮಳದಿಂದಾಗಿ ಇದಕ್ಕೆ ಬೇಡಿಕೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಬಳಸುತ್ತಾರೆ. ಸಿಹಿ ತಿನಿಸುಗಳ ರುಚಿ ಹೆಚ್ಚಿಸುವ ಏಲಕ್ಕಿ ಆರೋಗ್ಯ ಲಾಭಗಳ ಬಗ್ಗೆ ನಿಮಗೆ ಗೊತ್ತೇ….
* ರಕ್ತ ಪರಿಚಲನೆಯನ್ನು ಸರಾಗವಾಗಿಸುವಲ್ಲಿ ಏಲಕ್ಕಿ ಸಹಕಾರಿ.
* ತಲೆನೋವು ಸತಾಯಿಸುತ್ತಿರುವಾಗ ಏಲಕ್ಕಿ ಸೇವಿಸಿದರೆ ಪರಿಣಾಮಕಾರಿ.
* ಅಜೀರ್ಣ ಸಮಸ್ಯೆಗೆ ಏಲಕ್ಕಿ ಉತ್ತಮ ಮದ್ದು.
* ಬಾಯಿಯ ದುರ್ವಾಸನೆಯನ್ನು ತಡೆಯಲು ಸಹಕಾರಿ.
* ಅಸ್ತಮಾ ಮತ್ತು ಉಸಿರಾಟದ ತೊಂದರೆ ಇರುವವರು ಇದನ್ನು ನಿಯಮಿತವಾಗಿ ಸೇವಿಸಬಹುದು.
* ನಿಶ್ಶಕ್ತಿ ಮತ್ತು ಬಾಯಿ ಹುಣ್ಣಿಗೂ ಏಲಕ್ಕಿ ರಾಮಬಾಣ.
* ವಾಂತಿ, ಕೆಮ್ಮು, ಗ್ಯಾಸ್ ಪ್ರಾಬ್ಲಮ್ ಮತ್ತಿತರೆ ತೊಂದರೆಗಳಿಗೆ ಪರಿಣಾಮಕಾರಿ.
* ಏಲಕ್ಕಿ ಪುಡಿಗೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಬಾಯಿಹುಣ್ಣು ಗುಣವಾಗುತ್ತದೆ.
* ಉರಿ ಮೂತ್ರವಿದ್ದಲ್ಲಿ ಏಲಕ್ಕಿ ಪುಡಿಯ ಜೊತೆಗೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಸೇವಿಸಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ.
* 1 ಚಿಟಿಕೆ ಏಲಕ್ಕಿ ಪುಡಿ ಮತ್ತು 1 ಚಮಚ ಅರಿಶಿಣ ಪುಡಿಯನ್ನು 1 ಲೋಟ ಹಾಲಿನೊಂದಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ, ರಕ್ತ ಹೀನತೆ ನಿವಾರಣೆಯಾಗುತ್ತದೆ.
* ಏಲಕ್ಕಿ ಪುಡಿಯನ್ನು ಹಿಪ್ಪಲಿ ಬೇರಿನ ಪುಡಿ ಮತ್ತು ತುಪ್ಪದ ಜೊತೆ ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
* 2 – 3 ಏಲಕ್ಕಿ ಕಷಾಯಕ್ಕೆ , 4 – 5 ಪುದೀನಾ ಎಲೆಯ ರಸ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.