ಏಲಕ್ಕಿ ಅಂದ್ಮೇಲೆ ಅದು ಎಲ್ಲರ ಅಡುಗೆ ಮನೆಗಳಲ್ಲಿ ಸ್ಥಾನ ಪಡೆದಿರುತ್ತೆ . ಒಂದು ಪುಟ್ಟ ಏಲಕ್ಕಿ ನಿಮ್ಮ ದೇಹದ ಅದೆಷ್ಟೋ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು .
ಈಗಿನ ಕಾಲದಲ್ಲಿ ಹೃದಯದ ಸಮಸ್ಯೆಯಿಂದ ಬಳಲುವವರೇ ಹೆಚ್ಚು. ಇದರಿಂದಾಗಿ ಹೃದಯದ ಬಡಿತ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಹೃದಯ ಬಡಿತವನ್ನ ಸರಿದೂಗಿಸೋಕೆ ಏಲಕ್ಕಿ ಸಹಕಾರಿ ಅನ್ನೋ ವಿಚಾರ ನಿಮಗೆ ಗೊತ್ತಿದೆಯೇ..? ಏಲಕ್ಕಿಯಲ್ಲಿರುವ ಪೋಟ್ಯಾಷಿಯಂ, ಕ್ಯಾಲ್ಸಿಯಂ ಹಾಗೂ ಮ್ಯಾಗ್ನೇಷಿಯಂ ಅಂಶ ನಿಮ್ಮ ಹೃದಯದ ಆರೋಗ್ಯವನ್ನ ಕಾಪಾಡಲಿದೆ.
ಶ್ವಾಸಕೋಶದ ಆರೋಗ್ಯಕ್ಕೂ ಏಲಕ್ಕಿ ಸಹಾಯಕ, ಅಸ್ತಮಾ, ಶೀತ, ಕೆಮ್ಮಿನಿಂದ ಬಳಲುತ್ತಿರುವವರು ಏಲಕ್ಕಿಯನ್ನ ಸೇವಿಸಿದ್ರೆ ತುಂಬಾನೇ ಒಳ್ಳೆಯದು.
ಏಲಕ್ಕಿ ಸೇವನೆಯಿಂದ ರಕ್ತದೊತ್ತಡ ಕೂಡ ಸರಿಯಾಗಲಿದೆ. ದೇಹದಲ್ಲಿ ಅನೇಕ ಕಾಯಿಲೆಗಳು ಆರಂಭವಾಗೋದೇ ಅಧಿಕ ರಕ್ತದೊತ್ತಡದಿಂದ. ಹೀಗಾಗಿ ದಿನಕ್ಕೆ 3 ಏಲಕ್ಕಿಗಳನ್ನ ಸೇವಿಸಿದ್ರೆ ನಿಮ್ಮ ರಕ್ತದೊತ್ತಡ ಕಂಟ್ರೋಲ್ನಲ್ಲಿ ಇರಲಿದೆ.
ಅನೇಕರಿಗೆ ಬಾಯಿಯಲ್ಲಿ ವಾಸನೆ ಬರೋದ್ರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಮಾತನಾಡೋಕೆ ಹಿಂಜರಿಯುತ್ತಾರೆ. ಅಂತವರು ಏಲಕ್ಕಿ ಸೇವನೆ ಮಾಡಿದ್ರೆ ಈ ಸಮಸ್ಯೆ ಮಾಯವಾಗಲಿದೆ.
ಇದರ ಜೊತೆಯಲ್ಲಿ ಮಲಬದ್ಧತೆ ಹಾಗೂ ಲೈಂಗಿಕ ಕ್ರಿಯೆಯ ಎಲ್ಲಾ ಸಮಸ್ಯೆಗಳಿಗೂ ಏಲಕ್ಕಿ ಪರಿಹಾರ ನೀಡಲಿದೆ.